ಅಪರೂಪದ ಶಸ್ತ್ರಚಿಕಿತ್ಸೆಯ ಆಘಾತಗಳಿಂದ ಮನುಷ್ಯನಿಗೆ ಮುಕ್ತಿ

ಗುರುವಾರ, 2 ಫೆಬ್ರವರಿ 2017 (12:33 IST)
ಸುಮಾರು 35 ವರ್ಷದ ರಮೇಶ್ ಅವರಿಗೆ ತನ್ನ ಎಡಕಿವಿಯ ಹಿಂಭಾಗದಲ್ಲಿ ದುರ್ಮಾಂಸ ಬೆಳವಣಿಗೆಯಾಗಿತ್ತು. ಹುಟ್ಟಿದಾಗಿನಿಂದಲೂ ಇದು ಹೀಗೇ ಇದ್ದು, ಇತ್ತೀಚಿನ ದಿನದಲ್ಲಿ ದೊಡ್ಡದಾಗಿ ರಮೇಶ್ ಅವರಿಗೆ ಹೆಚ್ಚು ತೊಂದರೆ ಕೊಡಲು ಶುರುಮಾಡಿತ್ತು. 
 
ಇದಲ್ಲದೆ ಇದರಿಂದ ತೀರ ಮುಜುಗರಕ್ಕೆ ಈಡಾಗುವುದು ಮಾತ್ರವಲ್ಲದೆ ಉಳಿದ ಜನರಿಗೆ ನಿರಂತರವಾಗಿ ಈ ಬಗ್ಗೆ ಉತ್ತರ ಹೇಳುವ ಕೆಲಸವೂ ಆಗುತ್ತಿತ್ತು. ಬೆಂಗಳೂರಿನ ಆಸ್ಪತ್ರೆಯಲ್ಲಿ ಎಂಆರ್‍ಐ ಮಾಡಿಸಿದಾಗ ಇದೊಂದು ಮ್ಯಾಸ್ಕ್ಯುಲಾರ್ ಟ್ಯೂಮರ್ ಎಂದು ತಿಳಿದುಬಂತು.
 
ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ಮುಖದ ಭಾಗದ ನರಗಳಿಗೆ ಘಾಸಿಯುಂಟಾಗಿ, ಹೆಚ್ಚು ರಕ್ತ ಹೋಗುವ ಸಾಧ್ಯತೆಗಳಿವೆ ಹಾಗೂ ಅತ್ಯಂತ ಹೆಚ್ಚು ಅಪಾಯ ಇರುವುದರಿಂದ ಹಲವಾರು ಆಸ್ಪತ್ರೆಗಳು ಶಸ್ತ್ರಚಿಕಿತ್ಸೆ ಮಾಡುವು ಮೂಲಕ ಇದನ್ನು ಸರಿಪಡಿಸಲು ವೈದ್ಯರು ಒಪ್ಪಿರಲಿಲ್ಲ.
 
ಈ ಸವಾಲನ್ನು ಸ್ವೀಕರಿಸಿದ ಮಾರ್ಥಾಸ್ ಆಸ್ಪತ್ರೆಯ ಪ್ಲಾಸ್ಟಿಕ್ ಸರ್ಜನ್‍ಗಳು ಸುಮಾರು 2.30 ಗಂಟೆ ಶಸ್ತ್ರಚಿಕಿತ್ಸೆ ನಡೆಸಿ, 10 ಸೆಂ.ಮೀ ದಪ್ಪದ ಟ್ಯುಮರ್ ಅನ್ನು ಯಶಸ್ವಿಯಾಗಿ ತೆಗೆದರು. 
ಡಾ. ಬಿ. ರಾಹುಲ್ ಶೆಟ್ಟಿ, ಪ್ಲಾಸ್ಟಿಕ್ ಸರ್ಜನ್, ಮಾರ್ಥಾಸ್ ಆಸ್ಪತ್ರೆ, ಅವರು ಮಾತನಾಡುತ್ತಾ, ಶಸ್ತ್ರಚಿಕಿತ್ಸೆಯಿಂದ ಮುಖದ ಭಾಗಕ್ಕೆ ಅಪಾಯವಾಗುವ ಸಾಧ್ಯತೆಗಳು ಹೆಚ್ಚಿತ್ತು. ಹಾಗೂ ಇದು ಅತ್ಯಂತ ಅಪಾಯವಾಗಿತ್ತು. ಕಡಿಮ ರಕ್ತ ಹೋಗುವಂತೆ ಅತ್ಯಂತ ಶೀಘ್ರದಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಅಲ್ಲದೆ ಮುಖದ ಭಾಗಕ್ಕೆ ಹೋಗುವ ನರವನ್ನು ಗುರುತಿಸಿ, ಅದಕ್ಕೆ ಘಾಸಿಯಾಗದಂತೆ ಅವನ್ನು ಸ್ಟಿಮಿಲೇಟರ್ ಮೂಲಕ ಪ್ರತ್ಯೇಕಿಸಲಾಯಿತು. 
 
ಶಸ್ತ್ರಚಿಕಿತ್ಸೆಯನ್ನು ಮುಂಚಿತವಾಗಿ ಸರಿಯಾಗಿ ಯೋಜನೆ ಹಾಗೂ ಅರ್ಥ ಮಾಡಿಕೊಂಡು ಚಿಕಿತ್ಸೆ ನೀಡಲಾಗಿತ್ತು. ಶಸ್ತ್ರಚಿಕಿತ್ಸೆಯ ವೇಳೆ ನೂತನ ಆವಿಷ್ಕಾರದಂತೆ ಮಾಡಿಕೊಂಡು, ಅಂದರೆ ರಕ್ತ ಕಡಿಮೆ ಸೋರುವಂತೆ ಮಾಡಲು ಟ್ಯುಮರ್ ಸುತ್ತ ಪ್ರಥಮವಾಗಿ ಸ್ಟ್ರಿಚ್ ಹಾಕಲಾಗುತ್ತದೆ. ಎಲೆಕ್ಟ್ರೋ ಕಟೇರಿ ಹಾಗೂ ಮ್ಯಾಗ್ನಿಫಿಕೇಶನ್ ಮೂಲಕ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಗೊಳಿಸಲಾಯಿತು. ಅನಸ್ತೆಟಿಕ್ ಸಹ ರಕ್ತ ಕಡಿಮೆ ಸೋರಿಕೆಯಾಗುವಂತೆ ಮಾಡುತ್ತದೆ. ತಲೆ ಹಾಗೂ ಮೇಲ್ಬಾಗಕ್ಕೆ ಹೈಪೋಥೆಟಿಕ್ ಅನಸ್ತೆಟಿಕ್ ಅನ್ನು ಬಳಸಲಾಯಿತು. ಇದಲ್ಲದೆ ಸರಿಹೊಂದುವ ರಕ್ತವನ್ನು ಅಗತ್ಯವಿದ್ದಲ್ಲಿ ಬಳಸಲು ಸಿದ್ಧತೆ ಮಾಡಲಾಗಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ