ಬೇಸಿಗೆಯಲ್ಲಿ ಮೈ ಕೈ ನೋವಾಗುತ್ತಿದೆಯೇ ಇದಕ್ಕೆ ಈ ಕಾರಣವೂ ಇರಬಹುದು

Krishnaveni K

ಶನಿವಾರ, 1 ಮಾರ್ಚ್ 2025 (12:52 IST)
ಬೆಂಗಳೂರು: ಬೇಸಿಗೆಯಲ್ಲಿ ಸ್ವಲ್ಪ ಕೆಲಸ ಮಾಡಿದರೆ ವಿಪರೀತ ಸುಸ್ತು, ಮೈ ಕೈ ನೋವಾಗುತ್ತದೆ. ಇದಕ್ಕೆ ಈ ಕಾರಣವೂ ಇರಬಹುದು. ಏನು ಎಂದು ಇಲ್ಲಿ ನೋಡಿ.

ಬೇಸಿಗೆಯಲ್ಲಿ ಬಿಸಿಲಿನ ತಾಪಮಾನಕ್ಕೆ ಯಾವುದೇ ಕೆಲಸ ಮಾಡಿದರೂ ಬೇಗನೇ ಸುಸ್ತಾಗಿಬಿಡುತ್ತೇವೆ. ಅದರಲ್ಲೂ ಹೊರಗೆ ಓಡಾಡಿ ಬಂದರೆ ಫುಲ್ ಡ್ರೈನ್ ಔಟ್ ಆಗಿಬಿಡುತ್ತೇವೆ. ಇದಕ್ಕೆ ಕಾರಣ ಬಿಸಿಲು ಎಂದು ಥಟ್ಟನೇ ಹೇಳಬಹುದು.

ಆದರೆ ಕೆಲವರಿಗೆ ಮಾಂಸಖಂಡಗಳ ನೋವು ಬಂದು ಬಿಡುತ್ತದೆ. ಕೈ, ಕಾಲುಗಳ ಗಂಟು ನೋವು ಬರುತ್ತವೆ. ಬೇಸಿಗೆಯಲ್ಲಿ ಈ ರೀತಿ ಆಗುವುದಕ್ಕೆ ಕಾರಣವೂ ಇದೆ. ತಾಪಮಾನ ವಿಪರೀತವಾಗಿ ದೇಹದಿಂದ ನೀರಿನ ಅಂಶ ಬೆವರಿನ ರೂಪದಲ್ಲಿ ಹೊರಹೋಗುತ್ತದೆ.

ಹೀಗಾಗಿ ಬೇಸಿಗೆಯಲ್ಲಿ ಹೆಚ್ಚು ನೀರು ಸೇವನೆ ಮಾಡಬೇಕಾಗುತ್ತದೆ. ಬೇಸಿಗೆಯಲ್ಲಿ ನೀರು ಸಾಕಷ್ಟು ಕುಡಿಯದೇ ಇದ್ದಾಗ ದೇಹ ಡಿಹೈಡ್ರೇಷನ್ ಗೊಳಗಾಗುತ್ತದೆ. ಇದರ ಭಾಗವಾಗಿ ಮೈ ಕೈ ನೋವು ಬರುವ ಸಾಧ್ಯತೆಯಿರುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ