ರಕ್ತದಾನ ಮಾಡಿ.. ತೂಕವನ್ನು ಕಡಿಮೆ ಮಾಡಿಕೊಳ್ಳಿ

ಬುಧವಾರ, 29 ಜೂನ್ 2016 (14:53 IST)
ರಕ್ತದಾನ ಜೀವನದ ಒಂದು ಉಡುಗೊರೆ.. ಮತ್ತೊಂದು ಜೀವಕ್ಕೆ ಪ್ರಾಣವನ್ನು ಉಳಿಸಲು ರಕ್ತ ಬೇಕೇ ಬೇಕು. ರಕ್ತದಾನ ಮಾಡುವವರಲ್ಲಿ ನೀವೂ ಒಬ್ಬರಾಗಿದ್ದರೆ ಅದು ನಿಮ್ಮಗೆ ಉಪಯುಕ್ತಕಾರಿಯಾಗಬಲ್ಲದ್ದು.. ರಕ್ತದಾನ ಮಾಡುವುದರಿಂದ ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಬಹುದು ಎಂದು ಅಧ್ಯಯನದ ವರದಿಗಳು ಸಲಹೆ ನೀಡಿವೆ.
ರಕ್ತದಾನ ಮಾಡುವುದರಿಂದ ನಿಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಆರೋಗ್ಯಕರ ಜೀವನವನ್ನು ಆನಂದಿಸಬಹುದು.. ಇನ್ನೂ ಹಲವು ರೋಗಗಳನ್ನು ತಡೆಯುವಲ್ಲಿ ರಕ್ತದಾನ ಸಹಾಯಕಾರಿಯಾಗಲಿದೆ. ನೀವೂ ತೂಕ ಕಡಿಮೆ ಮಾಡಬೇಕೇ..? ಹಾಗಾದ್ರೆ ರಕ್ತದಾನ ಮಾಡುವುದನ್ನು ಮರೆಯಬೇಡಿ ಎನ್ನುತ್ತದೆ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ.. 
 
ನಿಯಮಿತವಾಗಿ ರಕ್ತದಾನ ಮಾಡಿದ್ರೆ ನಿಮ್ಮ ದೇಹದಲ್ಲಿರುವ 650 ಕ್ಯಾಲೋರಿಗಳನ್ನು ಕಡಿಮೆ ಮಾಡಿಕೊಳ್ಳಬಹುದು. ಯಾರು ತಮ್ಮ ರಕ್ತವನ್ನು ದಾನ ಮಾಡುತ್ತಾರೆ ಅಂಥವರು ನಿಸ್ಸಂಶಯವಾಗಿ ತೂಕವನ್ನು ಕಳೆದುಕೊಳ್ಳುತ್ತಾರೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ. 
 
 ಇನ್ನೂ ಇದರ ಜತೆಗೆ ರಕ್ತದಾನ ಹೃದಯ ರೋಗದ ಅಪಾಯವನ್ನು ತಡೆಯಬಲ್ಲದ್ದು, ಅಲ್ಲದೇ ನಿಮ್ಮ ರಕ್ತದಲ್ಲಿರುವ ಆಕ್ಸಿಡೈಸ್ ಹಾಗೂ ಕಬ್ಬಿಣ ಪ್ರಮಾಣವನ್ನು ಕಡಿಮೆಗೊಳಿಸಬಲ್ಲದ್ದು. ಯಾಕೆಂದರೆ ರಕ್ತದಲ್ಲಿ ಹೆಚ್ಚುವರಿ ಕಬ್ಬಿಣ ಅಂಶ ಇರುವುದರಿಂದ ಇದು ನಿಮ್ಮ ಹೃದಯಕ್ಕೆ ತೊಂದರೆಯನ್ನುಂಟು ಮಾಡುತ್ತದೆ.
 
ಅಲ್ಲದೇ ರಕ್ತದಲ್ಲಿ ಹೆಚ್ಚು ಐರನ್ ಅಂಶ ಇರವುದರಿಂದ ಕ್ಯಾನ್ಸರ್ ಅಪಾಯ ಎದುರಾಗಬಹುದು. ಆದ್ದರಿಂದ ಕಬ್ಬಿಣ ಅಂಶ ತಗ್ಗಿಸಲು ನಿಯಮಿತವಾಗಿ ರಕ್ತದಾನ ಮಾಡಲೇ ಬೇಕು ಎಂದು ನಡೆಸಲಾದ ಅಧ್ಯಯನ ವರದಿಯಿಂದ ತಿಳಿದು ಬಂದಿದೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ