ಉಪ್ಪು ಅತಿಯಾದ್ರೆ ಆಪತ್ತು !

ಮಂಗಳವಾರ, 25 ಅಕ್ಟೋಬರ್ 2016 (15:41 IST)
ಬೆಂಗಳೂರು: ಉಪ್ಪು ತಿಂದೋನು ನೀರು ಕುಡಿಲೇ ಬೇಕು.. ಆದ್ರೆ, ಈಗೀನ ಜಾಯಮಾನ ಬದಲಾಗಿದೆ. ಉಪ್ಪು ತಿಂದೋನು ಉಪ್ಪಿನಿಂದ ಬರೋ ಕಾಯಿಲೆಯನ್ನು ಎದುರಿಸೋಕು ತಯಾರಿರಬೇಕು. ಹೌದು ದೇಹಕ್ಕೆ ಯಾವುದೇ ಎಷ್ಟು ಬೇಕು ಅಷ್ಟನ್ನೇ ಅದು ಜೀರ್ಣ ಮಾಡಿಕೊಳ್ಳುತ್ತೆ. ಹೆಚ್ಚಾಗಿದ್ದನ್ನ ತಾನೇ ಕಾಯಿಲೆಯೋ ಕಸಾಲೆಯೋ ಅನ್ನೋ ಮೂಲಕ ಹೊರಹಾಕುತ್ತೆ. ಇದೀಗ ಉಪ್ಪು ಅತಿಯಾದ್ರೆ ಏನಾಗುತ್ತೆ ಗೊತ್ತಾ.. ಹಾಗಾದ್ರೆ ಇಲ್ಲಿದೆ ನೋಡಿ.
 

 
1. ಬಿಪಿ ಬೇಡ ಅಂದ್ರು ಬರುತ್ತೆ
ಹೌದು ಬ್ಲಡ್ ಪ್ರೇಶರ್ ಉಪ್ಪಿನಿಂದ ಬರುತ್ತೆ ಅನ್ನೋದು ಎಲ್ಲರಿಗೂ ಗೊತ್ತು ಆದ್ರೆ, ನಾವು ಬೇಡ ಅಂದ್ರು ನಮ್ಮ  ದೇಹವೇ ಉಪ್ಪು ಬಯಸುತ್ತೆ. ಹೀಗಾಗಿ ಇದರಿಂದ ದೇಹ ಸೋಡಿಯಂನಿಂದ ಕೂಡುತ್ತೆ. ಸೋಡಿಯಂ ಪ್ರಮಾಣ ಹೆಚ್ಚಾದಂತೆ ಬಿಪಿ ಹೆಚ್ಚಾಗುತ್ತೆ. ಆ್ಯಕ್ಚುವಲಿ ನಮ್ಮ ದೇಹಕ್ಕೆ 4.6 ಗ್ರಾಂ ನಷ್ಟು ಮಾತ್ರ ಉಪ್ಪು ಬೇಕಾಗುತ್ತೆ. ಅದನ್ನಷ್ಟೆ ಬಳಸಿದ್ರೆ ಬಿಪಿನೂ ಬರಲ್ಲ, ಏನು ಬರಲ್ಲ. ಸೋ ಉಪ್ಪು  ಕಡಿಮೆ ಮಾಡಿ.
 
2 ಹೃದಯಕ್ಕೂ ಉಪ್ಪಿಗೂ ಆಗಿ ಬರೋಲ್ಲ!
ಸೋಡಿಯಂ ಪ್ರಮಾಣ ಜಾಸ್ತಿಯಾಗ್ತಿದ್ದಂತೆ, ದೇಹದಲ್ಲಿ ರಕ್ತನಾಳಗಳ ಬಿಗಿತ ಉಂಟಾಗುತ್ತೆ. ಜೊತೆಗೆ ಇದರಿಂದ ಹೃದಯ ಸಂಬಂಧಿ ಕಾಯಿಲೆ ಬಂದ್ರೂ ಬರಬಹುದು. 
 
3 ಮೆದುಳು ಕೈಕೊಡುತ್ತೆ ಹುಷಾರು!
ನಿತ್ಯ ಬದುಕಿನಲ್ಲಿ ಉಪ್ಪಿನ ಪ್ರಮಾಣ ಜಾಸ್ತಿಯಾದ್ರೆ, ಕೇವಲ ಹೃದಯ ಅಷ್ಟೆ ಅಲ್ಲದೇ ಮೆದುಳಿನ ಪವರ್ ಕೂಡಾ ಕಡಿಮೆಯಾಗುತ್ತೆ. ಹೀಗಾಗಿ ನಿತ್ಯ ಆಹಾರ ಪದ್ಧತಿಯಲ್ಲಿ ಉಪ್ಪಿನ ಬಗ್ಗೆ ಸ್ವಲ್ಪ ಕಾಳಜಿ ವಹಿಸಿ ತಿನ್ನಿ
 
4 ಕಿಡ್ನಿ ಸಮಸ್ಯೆ
ದೇಹದ ಪ್ರಮುಖ ಅಂಗಾಂಗಗಳಲ್ಲಿ ಕಿಡ್ನಿ ಪ್ರಮುಖ ಪಾತ್ರ ನಿರ್ವಹಿಸುತ್ತೆ. ರಕ್ತ ಚಲನೆಯಲ್ಲಿ ಅತೀ ಹೆಚ್ಚು ಶ್ರಮವಹಿಸುವ ಅಂಗಾಂಗ ಅಂದ್ರೂ ತಪ್ಪಲ್ಲ. ಆದ್ರೆ, ದೇಹದಲ್ಲಿ ಉಪ್ಪಿನ ಪ್ರಮಾಣ ಹೆಚ್ಚಾದ್ರೆ, ರಕ್ತದಲ್ಲೂ ಮಿಶ್ರಣವಾಗುತ್ತೆ, ಸೋಡಿಯಂ ರಕ್ತದೊಂದಿಗೂ ಬೆರೆತು ರಕ್ತ ಪಂಪು ಮಾಡುವಾಗ ಕಿಡ್ನಿ ಸಮಸ್ಯೆ ಎದುರಾಗಬಹುದು. ಇನ್ನೊಂದು ಮುಖ್ಯವಾದ ವಿಷ್ಯ ಏನಂದ್ರೆ ಕಿಡ್ನಿ ಸಮಸ್ಯೆ ಇರೋರು ಕಡಿಮೆ ಉಪ್ಪು ತಿಂದ್ರೆ ಸಮಸ್ಯೆ ಬೇಗ ನಿವಾರಣೆಯಾಗುತ್ತೆ. 
 
5 ಪಾಶ್ರ್ವವಾಯು ಸಂಭವಿಸಬಹುದು
ಶಾರೀರಿಕವಾಗಿ ಸದೃಢವಾಗಿದ್ದರೂ, ದೇಹದಲ್ಲಿ ಉಪ್ಪಿನ ಪ್ರಮಾಣ ಜಾಸ್ತಿಯಾದಂತೆ ಸೋಡಿಯಂ ಕಂಟೆಂಟ್ ಹೆಚ್ಚಾಗುತ್ತೆ, ಇದರಿಂದ ಪಾಶ್ರ್ವವಾಯು ಅಟ್ಯಾಕ್ ಆಗೋ ಸಂಭವ ಹೆಚ್ಚು. 
 
6 ಉಪ್ಪಿನ ಮೇಲೆ ಡಿಪೆಂಡ್ ಆಗದಿರಿ
ಉಪ್ಪನ್ನ ನಾವು ಊಟದಲ್ಲಿ ಮಾತ್ರವಲ್ಲದೇ, ಸಲಾಡ್, ಸವತೆಕಾಯಿ, ಮಾವಿನಕಾಯಿ ಜೊತೆ ಬಳಸುತ್ತೆವೆ. ಆದ್ರೆ ಅದರ ಪ್ರಮಾಣ ಕಡಿಮೆ ಮಾಡಿ ಅದರ ಪ್ಲೇಸ್ಗೆ ಪೆಪ್ಪರ್ ಪೌಡರ್ ಬಳಸಿದ್ರೆ, ಒಳಿತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ