ಮೊಸರು ತಿನ್ನುವವರು ಇನ್ಮೇಲೆ ಈ ಪದಾರ್ಥಗಳನ್ನ ಬೆರೆಸಿಕೊಂಡು ತಿಂದರೆ ಏನಾಗಲಿದೆ ಗೊತ್ತಾ…?
ಬುಧವಾರ, 6 ಜೂನ್ 2018 (21:16 IST)
ಬೆಂಗಳೂರು : ಮೊಸರು ಎಲ್ಲರು ಇಷ್ಟಪಡುವಂತದ್ದು. ಮೊಸರಿನಿಂದ ಹಲವು ಆರೋಗ್ಯಕರ ಪ್ರಯೋಜನಗಳಿವೆ ಎಂಬುದು ಈಗಾಗಲೇ ನಿಮಗೆಲ್ಲ ತಿಳಿದಿರುವ ವಿಷಯ. ಆದರೆ ಬರಿ ಮೊಸರನ್ನು ಮಾತ್ರ ಸೇವಿಸದೇ ಅದರೊಂದಿಗೆ ಕೆಲವು ಪದಾರ್ಥಗಳನ್ನ ಬೆರೆಸಿಕೊಂಡು ತಿಂದರೆ ಹಲವು ವಿಧದ ಅನಾರೋಗ್ಯ ಸಮಸ್ಯೆಗಳು ಸುಲಭವಾಗಿ ದೂರವಾಗುತ್ತವೆ. ಹಾಗಾದರೆ ಮೊಸರಿನೊಂದಿಗೆ ಏನನ್ನ ಬೆರಿಸಿ ಸೇವಿಸ ಬೇಕು ಎಂಬುದು ಇಲ್ಲಿದೆ ನೋಡಿ.
* ಸ್ವಲ್ಪ ಮೊಸರಿನೊಂದಿಗೆ ಸಕ್ಕರೆ ಬೆರೆಸಿಕೊಂಡು ತಿನ್ನಬೇಕು. ಇದರಿಂದ ದೇಹಕ್ಕೆ ಕೂಡಲೆ ಶಕ್ತಿ ಸಿಗುತ್ತದೆ. ಮೂತ್ರಕೋಶದ ಸಮಸ್ಯೆಗಳು ದೂರವಾಗುತ್ತವೆ. ರಾತ್ರಿ ಊಟದ ಬಳಿಕ ಇದನ್ನ ತಿಂದರೆ ಜೀರ್ಣಕ್ರಿಯೆ ಸರಾಗವಾಗಿ ಆಗುತ್ತದೆ.
* ಮೊಸರಿನಲ್ಲಿ ಸ್ವಲ್ಪ ಓಟ್ಸ್ ಬೆರೆಸಿ ತಿನ್ನಬೇಕು. ಹೀಗೆ ಮಾಡುವುದರಿಂದ ಒಳ್ಳೇ ಪ್ರೋಬಯೋಟಿಕ್ಸ್, ಪ್ರೋಟೀನ್ ಲಭಿಸುತ್ತದೆ. ಇವು ಮಾಂಸಖಂಡಗಳ ಶಕ್ತಿಗೆ ಸಹಾಯಕಾರಿ.
* ಮೊಸರಿನೊಂದಿಗೆ ಜೇನುತುಪ್ಪ ಬೆರೆಸಿ ತಿಂದರೆ ಹೊಟ್ಟೆಯಲ್ಲಿನ ಅಲ್ಸರ್ ಮಾಯವಾಗುತ್ತದೆ. ಈ ಮಿಶ್ರಣ ಆಂಟಿಬಯೋಟಿಕ್ ಆಗಿ ಕೆಲಸ ಮಾಡುತ್ತದೆ. ಇದರಿಂದ ದೇಹದಲ್ಲಿನ ಇನ್‌ಫೆಕ್ಷನ್ ಕೂಡಲೆ ಕಡಿಮೆಯಾಗುತ್ತದೆ.
* ಮೊಸರಿನೊಂದಿಗೆ ವಿವಿಧ ರೀತಿಯ ಹಣ್ಣುಗಳನ್ನು ಬೆರೆಸಿಕೊಂಡು ತಿಂದರೆ ಶರೀರ ರೋಗನಿರೋಧಕ ಶಕ್ತಿ ಹೆಚ್ಚುತ್ತೆ. ಹಲವು ವಿಧದ ಇನ್‌ಫೆಕ್ಷನ್‌ಗಳು, ರೋಗಗಳು ಬರದಂತೆ ನೋಡಿಕೊಳ್ಳಬಹುದು.
* ಮೊಸರಿನೊಂದಿಗೆ ಸ್ವಲ್ಪ ಅರಿಶಿಣ, ಸ್ವಲ್ಪ ಶುಂಠಿ ಬೆರೆಸಿ ತಿನ್ನಬೇಕು. ಇದರಿಂದ ಫೋಲಿಕ್ ಆಸಿಡ್ ಶರೀರಕ್ಕೆ ಸೇರುತ್ತದೆ. ಇದು ಚಿಕ್ಕಮಕ್ಕಳಿಗೆ, ಗರ್ಭಿಣಿಯರಿಗೆ ಎಷ್ಟೋ ಉಪಯುಕ್ತ.
* ಮೊಸರಿನೊಂದಿಗೆ ಆರೆಂಜ್ ಜ್ಯೂಸ್ ಬೆರೆಸಿಕೊಂಡು ತಿನ್ನಬೇಕು. ಇದರಿಂದ ಶರೀರಕ್ಕೆ ಸಾಕಷ್ಟು ವಿಟಮಿನ್ ಸಿ ಲಭ್ಯವಾಗುತ್ತದೆ. ಇದು ಕೀಲು ನೋವು ಕಡಿಮೆ ಮಾಡುತ್ತೆ. ವೃದ್ಧಾಪ್ಯ ಸಮಸ್ಯೆಗಳನ್ನು ದೂರ ಮಾಡುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ