ವಯಸ್ಸಾದವರಿಗೆ ಹೆಚ್ಚು ಕ್ಯಾಲ್ಶಿಯಂ ಮಾತ್ರೆ ಕೊಡುವುದೂ ಅಪಾಯ!
ಶನಿವಾರ, 17 ಡಿಸೆಂಬರ್ 2016 (10:57 IST)
ಬೆಂಗಳೂರು: 60 ವರ್ಷ ದಾಟಿದ ಮೇಲೆ ಮಹಿಳೆಯರಲ್ಲಿ ಸೊಂಟ, ನೋವು ಕಾಲು ನೋವು ಸಾಮಾನ್ಯ. ವೈದ್ಯರಲ್ಲಿಗೆ ಹೋದರೆ ಕ್ಯಾಲ್ಶಿಯಂ ಕೊರತೆ ಎಂದು ಮಾತ್ರೆ ಕೊಟ್ಟು ಬಿಡುತ್ತಾರೆ. ಆದರೆ ಇಂತಹ ಮಾತ್ರೆಗಳನ್ನು ಹೆಚ್ಚು ತಿನ್ನುವುದೂ ಒಳ್ಳೆಯದಲ್ಲವಂತೆ!
ನಾರ್ವೆ ಯೂನಿವರ್ಸಿಟಿಯ ಸಂಶೋಧನೆ ಪ್ರಕಾರ ಇಂತಹ ಮಾತ್ರೆಗಳು ಮೂಳೆ ಮುರಿತ ಮತ್ತು ಎಲುಬಿನ ಸವೆತದಂತಹ ಸಮಸ್ಯೆಗಳನ್ನು ಕಮ್ಮಿ ಮಾಡುವುದೇನೋ ನಿಜ. ಆದರೆ ಇದರಿಂದ ಹೃದಯಾಘಾತ ಮತ್ತು ಪಾರ್ಶ್ವವಾಯುವಿನಂತಹ ಅಪಾಯ ಹೆಚ್ಚು ಎನ್ನಲಾಗಿದೆ.
ಅದೂ 65 ಕ್ಕಿಂತ ಮೇಲ್ಪಟ್ಟ ಮಹಿಳೆಯರಲ್ಲಿ ಈ ಅಪಾಯ ಜಾಸ್ತಿಯಂತೆ. ವಿಟಮಿನ್ ಡಿ ಮಾತ್ರೆ ಸೇವಿಸುವ ಮಹಿಳೆಯರಲ್ಲಿ ಹೃದಯಾಘಾತದ ಸಮಸ್ಯೆ ಕಡಿಮೆಯಿರುವುದನ್ನು ಅವರು ಸಂಶೋಧನೆಯಿಂದ ಪತ್ತೆ ಮಾಡಿದ್ದಾರೆ.
ಹೀಗಾಗಿ ಕ್ಯಾಲ್ಶಿಯಂ ಅಥವಾ ವಿಟಾಮಿನ್ ಕೊರತೆಗೆ ಮಾತ್ರೆ ಸೇವಿಸುವ ಬದಲು, ಆಹಾರದಲ್ಲೇ ಅಂತಹ ಅಂಶ ಜಾಸ್ತಿ ತೆಗೆದುಕೊಳ್ಳುವುದು ಉತ್ತಮ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ