ಮೂಗಿನಲ್ಲಿ ಸದಾ ವರ್ಷಕಾಲವೇ? ಈ ಕಾರಣಗಳಿರಬಹುದು!

ಗುರುವಾರ, 2 ಫೆಬ್ರವರಿ 2017 (10:25 IST)
ಬೆಂಗಳೂರು: ಕೆಲವರಿಗೆ ವರ್ಷ ಪೂರ್ತಿ ಶೀತದ ಸಮಸ್ಯೆ. ಸದಾ ಪಕ್ಕದಲ್ಲಿ ನ್ಯಾಪ್ ಕಿನ್ ಇಟ್ಟುಕೊಳ್ಳಲೇಬೇಕು. ಹೀಗೆ ಪದೇ ಪದೇ ಶೀತವಾಗುವುದಕ್ಕೆ ಕಾರಣಗಳೇನಿರಬಹುದು ಗೊತ್ತಾ?

 
ಮುಖ್ಯವಾಗಿ ಅಸಮತೋಲಿತ ಆಹಾರ. ಹೆಚ್ಚು ಸಕ್ಕರೆಯ ಅಂಶವುಳ್ಳ ಆಹಾರ ಸೇವನೆ ಮಾಡುವುದರಿಂದ ಗುಣಮುಖರಾಗುವ ಸಾಧ್ಯತೆ ಕಡಿಮೆಯಾಗುತ್ತದೆ. ಹಣ್ಣು ತರಕಾರಿ ಮತ್ತು ಸೊಪ್ಪು ತರಕಾರಿ ಹಾಗೂ ಚಿಕನ್ ಸೂಪ್ ಸಾಕಷ್ಟು ಪ್ರಮಾಣದಲ್ಲಿ ಸೇವಿಸುವುದು ಶೀತಕ್ಕೆ ಪರಿಹಾರ.

ನಾವು ನಿರ್ಜಲೀಕರಣಕ್ಕೊಳಗಾಗುವುದು ಕಷ್ಟವೇನಲ್ಲ. ಸಣ್ಣ ಅನಾರೋಗ್ಯಕ್ಕೆ ತುತ್ತಾದರೂ ದೇಹ ನಿರ್ಜಲೀಕರಣಕ್ಕೊಳಗಾಗುತ್ತದೆ. ಹೀಗಾಗಿ ಸಾಕಷ್ಟು ದ್ರವಾಹಾರ ಸೇವಿಸುವುದು ಅಗತ್ಯ. ಸಾಕಷ್ಟು ನೀರು ಕುಡಿಯುವುದರಿಂದ ಮೂಗು ಮತ್ತು ದಪ್ಪ ಗೊಣ್ಣೆ ಕರಗಿ ರಿಲ್ಯಾಕ್ಸ್ ಆಗುತ್ತೀರಿ. ಶೀತವಾದಾಗ ಕಾಫಿ ಕಡೆಗೆ ಮನಸ್ಸು ವಾಲುತ್ತದೆ. ಆದರೆ ಕಾಫಿ ಮತ್ತು ಕಫೈನ್ ಅಂಶವಿರುವ ಆಹಾರ ವಸ್ತುಗಳನ್ನು ದೂರ ಮಾಡಿ.

ಒತ್ತಡವೂ ಶೀತಕ್ಕೆ ಕಾರಣವಾಗಬಹುದು. ಒತ್ತಡದಿಂದಾಗಿ ನಮ್ಮ ರೋಗ ನಿರೋಧಕ ಶಕ್ತಿ ಕುಂಠಿತವಾಗುತ್ತದೆ. ಇದರಿಂದ ಪಕ್ಕನೇ ಅನಾರೋಗ್ಯಕ್ಕೊಳಗಾಗುತ್ತೇವೆ. ಇನ್ನು ಧೂಮಪಾನ, ನಿದ್ರೆಯ ಕೊರತೆ ಕೂಡಾ ಪದೇ ಪದೇ ಶೀತವಾಗುವುದಕ್ಕೆ ಕಾರಣವಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ