ಇಡ್ಲಿ ಯಾವಾಗಲೂ ಹೂವಿನಂತೆ ಮೃದುವಾಗಿ ಇರಬೇಕೆಂದು ಬಯಸುತ್ತೇವೆ. ಆದರೆ ಚಳಿಗಾಲದಲ್ಲಿ ಹಿಟ್ಟು ಹುದುಗು ಬರುವುದಿಲ್ಲ. ಇದರಿಂದಾಗಿ ಇಡ್ಲಿ ಮೃದುವಾಗಿ ಬರುವುದಿಲ್ಲ. ಈ ಲೇಖನದಲ್ಲಿ ಇಡ್ಲಿ ಚೆನ್ನಾಗಿ ಬರಲು ಕೆಲವೊಂದು ಟಿಪ್ಸ್ ನೀಡಲಾಗಿದೆ. ಇದನ್ನು ಅನುಸರಿಸಿ, ಇಡ್ಲಿ ಮಾಡಿದ್ದಲ್ಲಿ ಮೃದುವಾಗಿ, ರುಚಿಯಾಗಿರುತ್ತದೆ.
1. ಉದ್ದಿನಬೇಳೆ ಹಾಗೂ ಅಕ್ಕಿ ಪ್ರತ್ಯೇಕ ನೆನೆಹಾಕಿ: ಹೆಚ್ಚಿನವರು ಉದ್ದಿನಬೆಳೆ ಹಾಗೂ ಅಕ್ಕಿಯನ್ನು ಒಟ್ಟಿಗೆ ನೆನೆಸಿಟ್ಟು, ರುಬ್ಬುತ್ತಾರೆ. ಆದರೆ ನೀವು ಅಕ್ಕಿ ಹಾಗೂ ಉದ್ದಿನ ಬೆಳೆಯನ್ನು ಪ್ರತ್ಯೇಕವಾಗಿ ನೆನೆಸಿ, ರುಬ್ಬುವುದರಿಂದ ಹುದುಗು ಚೆನ್ನಾಗಿ ಬರುತ್ತದೆ.
* ರುಬ್ಬುವಾಗ ನೀರು ತುಂಬಾ ಹಾಕಬೇಡಿ, ಸ್ವಲ್ಪ ನೀರು ಹಾಕಿ ರುಬ್ಬಿ
* ನೀವು ದೋಸೆಗೆ ಬೇಕಾದರೆ ಅಕ್ಕಿ, ಉದ್ದಿನ ಬೇಳೆಯನ್ನು ಜೊತೆಯಲ್ಲಿ ನೆನೆಹಾಕಬಹುದು.
* ಅಕ್ಕಿ, ಉದ್ದಿನ ಬೆಳೆಯ ಪ್ರಮಾಣ ಹೀಗಿರಲಿ
ನೀವು ಮೂರು ಕಪ್ ಅಕ್ಕಿ ನೆನೆ ಹಾಕಿದರೆ ಒಂದು ಕಪ್ ಉದ್ದಿನ ಬೇಳೆ ನೆನೆಹಾಕಿ.
* ರುಚಿಗೆ ಸ್ವಲ್ಪ ಮೆಂತೆ ಸೇರಿಸಿ
* ಒಂದು ಕಪ್ ಅವಲಕ್ಕಿ ಸೇರಿಸಿ, ಇಲ್ಲದಿದ್ದರೆ ಅನ್ನವನ್ನು ಹಾಕಬಹುದು.
ನಂತರ ರುಬ್ಬಿದ ಮಿಶ್ರಣವನ್ನು ಕೈಯಿಂದಲೇ ಮಿಕ್ಸ್‌ಮಾಡಿ. ಈ ರೀತಿ ಮಾಡುವುದಿರಂದ ಚಳಿಗಾಲದಲ್ಲಿ ಇಡ್ಲಿ ಹಿಟ್ಟು ಚೆನ್ನಾಗಿ ಹುದುಗಿ ಬರುತ್ತದೆ.