ಬೆಂಗಳೂರು: ಪ್ರಕೃತಿ ವರವಾಗಿ ನೀಡಿರುವ ಹಲವಾರು ನೈಸರ್ಗಿಕ ಆಹಾರಗಳಲ್ಲಿ ಮೊಸರು ಕೂಡ ಒಂದು. ಮೊಸರಿನಲ್ಲಿ ಅನೇಕ ಪೋಷಕಾಂಶ ಮತ್ತು ಆರೋಗ್ಯಕ್ಕೆ ಅಗತ್ಯವಿರುವ ಅಂಶವಿದೆ. ಕೇವಲ ಆರೋಗ್ಯಕ್ಕೆ ಮಾತ್ರವಲ್ಲ, ಮೊಸರನ್ನು ಸೌಂದರ್ಯ ವೃದ್ಧಿಗೂ ಬಳಸಲಾಗುತ್ತದೆ. ಮೊಸರು ಮುಪ್ಪನ್ನು ಮುಂದೂಡುತ್ತದೆ ಎಂಬ ಮಾತಿದೆ.
ಇಲ್ಲಿ ಆರೋಗ್ಯದ ದೃಷ್ಟಿಯಿಂದ ಮೊಸರಿನ ಕೆಲವು ಉಪಯೋಗಗಳ ಬಗ್ಗೆ ಮಾಹಿತಿ ನೀಡಲಾಗಿದೆ:
* ಮೊಸರಿನಲ್ಲಿನ ಕ್ಯಾಲ್ಸಿಯಂ ಮೂಳೆಗಳ ಬೆಳವಣಿಗೆಗೆ ಸಹಕಾರಿಯಾಗಿದೆ.
* ಸಂಧಿವಾತದ ವಿರುದ್ಧ ಹೋರಾಡಲು ಮೊಸರು ಸಹಕಾರಿ
* ಬೇಧಿ, ಮಲಬದ್ಧತೆ, ನಿದ್ರಾಹೀನತೆ, ಕಾಮಾಲೆಯಂತಹ ಕಾಯಿಲೆಗಳಿಗೆ ಮೊಸರು ಅತ್ಯುತ್ತಮ ಔಷಧ.
* ರಕ್ತದೊತ್ತಡವನ್ನು ಕಡಿಮೆ ಮಾಡುವ ಮೂಲಕ ಹೃದಯಾಘಾತದ ಸಂಭವವನ್ನು ತಪ್ಪಿಸುತ್ತದೆ.
* ಅಜೀರ್ಣದಿಂದ ಬಳಲುತ್ತಿರುವವರು ಒಂದು ಕಪ್ ಮೊಸರಿಗೆ 2 ಚಿಟಿಕೆ ಕಾಳುಮೆಣಸಿನ ಪುಡಿ, 2 ಚಿಟಿಕೆ ಜೀರಿಗೆ ಪುಡಿ ಹಾಗೂ ಒಂದು ಚಿಟಿಕೆ ಸೈಂಧಲವಣವನ್ನು ಬೆರೆಸಿ ಸೇವಿಸಿದರೆ ಅಜೀರ್ಣ ಸಮಸ್ಯೆ ನಿವಾರಣೆಯಾಗುತ್ತದೆ.