ಬೆಂಗಳೂರು : ಕೆಲವರಿಗೆ ತಲೆ ಕೂದಲಿನಲ್ಲಿ ಧೂಳು, ಕೊಳೆ ಕುಳಿತುಕೊಳ‍್ಳುವುದರಿಂದ ಹೇನುಗಳಾಗುತ್ತವೆ. ಇದರಿಂದ ಕಿರಿಕಿರಿ ಉಂಟಾಗುತ್ತದೆ. ಈ ಹೇನುಗಳ ಸಮಸ್ಯೆ ನಿವಾರಣೆಯಾಗಲು ಈ ಮನೆಮದ್ದನ್ನು ಹಚ್ಚಿ.
4 ಕರ್ಪೂರ ತೆಗೆದುಕೊಂಡು ಚೆನ್ನಾಗಿ ಪುಡಿ ಮಾಡಿ ಅದಕ್ಕೆ ½ ಚಮಚ ನಿಂಬೆರಸ, 2 ಚಮಚ ಕೊಬ್ಬರಿ ಎಣ್ಣೆ, ಹಾಕಿ ಮಿಕ್ಸ್ ಮಾಡಿ ಕರ್ಪೂರ ಕರಗುವವರೆಗೂ ಬಿಸಿ ಮಾಡಿ ತಣ್ಣಗಾದ ಮೇಲೆ ತಲೆಗೆ ಹಚ್ಚಿ ½ ಗಂಟೆ ಬಿಟ್ಟು ಸ್ನಾನ ಮಾಡಿದರೆ ಹೇನುಗಳು ಸಾಯುತ್ತವೆ. ಮತ್ತೆ ಹೇನುಗಳು ಹುಟ್ಟುವುದಿಲ್ಲ.