ಬೆಂಗಳೂರು: ಅಡುಗೆ ಮನೆಯಲ್ಲಿ ಮಸಾಲೆಯುಕ್ತ ಆಹಾರ ತಯಾರಿಸಿದ ಮೇಲೆ, ಮನೆ ತುಂಬಾ ವಾಸನೆ ಹರಡಿ ಕಿರಿ ಕಿರಿ ಉಂಟುಮಾಡುತ್ತಿದ್ದರೆ, ಅದನ್ನು ದೂರ ಮಾಡಲು ಕೆಲವು ಉಪಾಯಗಳನ್ನು ಮಾಡಿಕೊಳ್ಳಬಹುದು.
ಸುಗಂಧ ಭರಿತ ಕ್ಲೀನರ್: ಸಿಂಕ್ ಗೆ ಸುಗಂಧ ಭರಿತ ಕ್ಲೀನರ್ ಹಾಕಿ ಒರೆಸಿದರೆ ಸಾಕು. ಇಡೀ ಅಡುಗೆ ಮನೆಗೆ ಅದರ ಪರಿಮಳ ಹರಡುತ್ತದೆ.
ಮಜ್ಜಿಗೆ: ಬಳಸಿದ ಪಾತ್ರೆ ವಾಸನೆ ಬರುತ್ತಿದ್ದರೆ, ಕೊಂಚ ಮಜ್ಜಿಗೆ ಹಾಕಿ ತೊಳೆದುಕೊಂಡರೆ ಸಾಕು. ಕೆಟ್ಟ ವಾಸನೆ ದೂರವಾಗುತ್ತದೆ.
ಸುಗಂಧ ದ್ರವ್ಯಗಳು: ಚಕ್ಕೆ, ಲವಂಗವನ್ನು ನಿಂಬೆ ಹಣ್ಣು ಅಥವಾ ಕಿತ್ತಳೆ ಹಣ್ಣಿನ ಸಿಪ್ಪೆಯ ಜತೆ ನೀರಿನಲ್ಲಿ ಕುದಿಸಿ ವಾಸನೆ ಬರುವ ಜಾಗದಲ್ಲಿಟ್ಟರೂ ಸಾಕು.
ಸಾಂಬ್ರಾಣಿ ಹೊಗೆ: ವಿಪರೀತ ವಾಸನೆ ಬರುತ್ತಿದ್ದರೆ ಸಾಂಬ್ರಾಣಿ ಹೊಗೆಯನ್ನು ಹದವಾಗಿ ಹರಡಿದರೆ ಸಾಕು. ಮನೆಯೊಳಗೆ ಕಾಲಿಡುವಾಗಲೇ ಗಂ ಪರಿಮಳ ಬರುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ