Baby tips: ಚಿಕ್ಕ ಮಕ್ಕಳಿಗೆ ತಲೆನೋವಾಗುತ್ತಿದ್ದರೆ ಇದುವೇ ಬೆಸ್ಟ್ ಮೆಡಿಸಿನ್

Krishnaveni K

ಬುಧವಾರ, 9 ಏಪ್ರಿಲ್ 2025 (15:38 IST)
Photo Credit: Instagram
ಬೆಂಗಳೂರು: ನವಜಾತ ಶಿಶುಗಳಿಗೂ ಕೆಲವೊಮ್ಮೆ ತಲೆನೋವು ತಪ್ಪಿದ್ದಲ್ಲ. ಶೀತವಾದಾಗ ತಲೆನೋವಾಗುತ್ತಿದ್ದು, ಮಗು ವಿಪರೀತ ಅಳುತ್ತಿದ್ದರೆ ಏನು ಮಾಡಬೇಕು ಇಲ್ಲಿದೆ ಬೆಸ್ಟ್ ಟಿಪ್ಸ್.


ಹಲವು ಕಾರಣಗಳಿಗೆ ಚಿಕ್ಕ ಮಕ್ಕಳಲ್ಲೂ ತಲೆನೋವು ಕಂಡುಬರಬಹುದು. ಶೀತವಾಗಿದ್ದಾಗ, ಕಫ ತುಂಬಿದ್ದರೆ, ಅಜೀರ್ಣವಾದಾಗ ತಲೆನೋವು ಬರುವ ಸಾಧ್ಯತೆಯಿರುತ್ತದೆ. ನವಜಾತ ಮಕ್ಕಳಿಗೆ ತಲೆನೋವಾದಾಗ ಜೋರಾಗಿ ಅಳುತ್ತವೆ. ಆ ಕಿರಿ ಕಿರಿಯನ್ನು ಅವುಗಳಿಗೆ ತಾಳಲು ಆಗುವುದಿಲ್ಲ.

ಶ್ರೀಗಂಧ ಹಚ್ಚಿ
ಶೀತ, ಕಫ ಯಾವುದೇ ಕಾರಣಕ್ಕೆ ತಲೆನೋವಾಗುತ್ತಿದ್ದರೆ ಚಿಕ್ಕಮಕ್ಕಳಿಗೆ ಶ್ರೀಗಂಧವನ್ನು ಹಚ್ಚಬಹುದು. ಸ್ವಲ್ಪ ಗಂಧವನ್ನು ಬೌಲ್ ನಲ್ಲಿ ಹಾಕಿ ಸ್ವಲ್ಪ ನೀರು ಚಿಮುಕಿಸಿ ಹದ ಬಿಸಿ ಮಾಡಿ. ಬಳಿಕ ತಾಳುವಷ್ಟು ಬಿಸಿ ಇರುವಾಗಲೇ ಮಗುವಿನ ಹಣೆಗೆ ಹಚ್ಚಿ. ಇದರಿಂದ ಮಕ್ಕಳು ಕೊಂಚ ನಿರಾಳವಾಗುತ್ತಾರೆ.

ಬಿಸಿ ನೀರಿನ ಶಾಖ
ತಲೆನೋವಿನಿಂದ ಮಕ್ಕಳು ಕಿರಿ ಕಿರಿ ಅನುಭವಿಸುತ್ತಿದ್ದರೆ ಒಂದು ಶುದ್ಧವಾದ ಬಟ್ಟೆಯನ್ನು ಹದ ಬಿಸಿ ನೀರಿನಲ್ಲಿ ಅದ್ದಿ ಹಣೆಯ ಭಾಗಕ್ಕೆ ಶಾಖ ಕೊಡುತ್ತಿರಿ. ಇದರಿಂದ ತಲೆನೋವು ಆರಾಮವಾಗುತ್ತದೆ.

ವಿಶೇಷವಾಗಿ ಮಕ್ಕಳು ತಲೆನೋವು ಅನುಭವಿಸುತ್ತಿದ್ದಾಗ ಆದಷ್ಟು ಬೆಚ್ಚಗೆ ಮಲಗಿಸಿ. ಹೊರಗೆ ಗಾಳಿಗೆ ಮೈ ಒಡ್ಡಿದರೆ ಮತ್ತಷ್ಟು ಹೆಚ್ಚಾಗಬಹುದು. ಅದೇ ರೀತಿ ಫ್ಯಾನ್ ಗಾಳಿ ಸೋಕದಂತೆ ಎಚ್ಚರಿಕೆ ವಹಿಸಿ. ಫ್ಯಾನ್, ಎಸಿ ಮಕ್ಕಳ ತಲೆನೋವು ಹೆಚ್ಚಿಸಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ