ಬಾಯಿ ವಾಸನೆಯೇ? ಹೀಗೆ ಮಾಡಿ

ಗುರುವಾರ, 13 ಏಪ್ರಿಲ್ 2017 (09:03 IST)
ಬೆಂಗಳೂರು: ಬಾಯಿ ವಾಸನೆಯಿಂದ ಇನ್ನೊಬ್ಬರ ಬಳಿ ಮುಖ ಕೊಟ್ಟು ಮಾತನಾಡಲು ಸಂಕೋಚವೇ? ಹಾಗಿದ್ದರೆ, ಹೀಗೆ ಮಾಡಿ ನೋಡಿ.

 

ಬಾಯಿ ಆರೋಗ್ಯ ಎಲ್ಲಕ್ಕಿಂತ ಮುಖ್ಯ. ದಿನಕ್ಕೆ ಎರಡು ಬಾರಿ ಬ್ರಷ್ ಮಾಡಿ, ಏನೇ ತಿಂದರೂ ಚೆನ್ನಾಗಿ ಬಾಯಿ ತೊಳೆದುಕೊಳ್ಳಿ. ನಾಲಿಗೆ ಶುಚಿಯಾಗಿಡುವುದೂ ಮುಖ್ಯ. ಆದಷ್ಟು ರಾತ್ರಿ ಹೊತ್ತು, ಈರುಳ್ಳಿ, ಬೆಳ್ಳುಳ್ಳಿಯಂತಹ ಕಡು ವಾಸನೆಯ ಆಹಾರ ಸೇವಿಸಬೇಡಿ.

 

ಕಾಫಿ, ಹಾಲು ಸೇವನೆಯಿಂದಲೂ ಬಾಯಿ ವಾಸನೆ ಬರಬಹುದು. ಅಲ್ಲದೆ, ತಂಬಾಕಿನ ಉತ್ಪನ್ನಗಳು ಬಾಯಿ ವಾಸನೆಗೆ ಮಾತ್ರವಲ್ಲ, ಕ್ಯಾನ್ಸರ್ ಗೂ ಕಾರಣವಾಗುತ್ತದೆ. ಆದಷ್ಟು ನೀರು ಮತ್ತು ನೀರಿನಂಶ ಸೇವಿಸುತ್ತಿರಬೇಕು.

 
ಧೂಮಪಾನದಂತಹ ಕೆಟ್ಟ ಚಟ ಬಿಟ್ಟು ಬಿಡಿ. ಏನೇ ಮಾಡಿದರೂ, ಬಾಯಿವಾಸನೆ ಹೋಗುತ್ತಿಲ್ಲವಂದಾದರೆ, ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಯಾಕೆಂದರೆ ಬಾಯಿ ವಾಸನೆ ಕೂಡಾ ಕೆಲವು ಮೌಖಿಕ ಅನಾರೋಗ್ಯದ ಸೂಚನೆಯಾಗಿರಬಹುದು.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ