ಮುಖಕ್ಕೆ ಫೇಸ್ ಪ್ಯಾಕ್ ಹಚ್ಚುವವರಿಗೆ ಈ ವಿಚಾರ ತಿಳಿದಿರಲಿ

ಶನಿವಾರ, 2 ನವೆಂಬರ್ 2019 (06:35 IST)
ಬೆಂಗಳೂರು : ಮುಖ ಅಂದವಾಗಿ ಕಾಣಲಿ ಎಂದು ಫೇಸ್ ಪ್ಯಾಕ್ ಗಳನ್ನು ಹಚ್ಚುತ್ತಾರೆ. ಆದರೆ ಫೇಸ್ ಪ್ಯಾಕ್ ಹಚ್ಚುವ ಮೊದಲು ಹಾಗೂ ನಂತರ ಕೆಲವು ಟಿಪ್ಸ್ ಗಳನ್ನು ಫಾಲೋ ಮಾಡಬೇಕು ಇಲ್ಲವಾದರೆ ಅದರಿಂದ ಮುಖದ ಅಂದ ಕೆಡಬಹುದು.



ಯಾವುದೇ ಫೇಸ್ ಪ್ಯಾಕ್ ನ್ನು ಹಚ್ಚುವ ಮೊದಲು ಉಗುರು ಬೆಚ್ಚಗಿನ ನೀರಿನಲ್ಲಿ ಮುಖವನ್ನು ತೊಳೆಯಿರಿ. ನಂತರ ಮುಖವನ್ನು ಚೆನ್ನಾಗಿ ಒರೆಸಿಕೊಳ್ಳಿ. ಬಳಿಕ ಪೆಸ್ ಪ್ಯಾಕ್ ನ್ನು ಹಚ್ಚಿ. ಆದರೆ ಫೇಸ್ ಪ್ಯಾಕ್ ಹಚ್ಚಿದ ಮೇಲೆ ಬಿಸಿಲಿಗೆ ಹೋಗುವಂತಿಲ್ಲ. ಬಳಿಕ ಸರಿಯಾದ ಸಮಯಕ್ಕೆ ಫೇಸ್ ಪ್ಯಾಕ್ ನ್ನು ತೆಗೆದು ಮತ್ತೆ ಉಗುರು ಬೆಚ್ಚಗಿನ ನೀರಿನಲ್ಲಿ ಮುಖವನ್ನು ತೊಳೆದು ಮುಖವನ್ನು ಚೆನ್ನಾಗಿ ಒರೆಸಿಕೊಳ್ಳಿ.

 

ಹಾಗೆ ಫೇಸ್ ಪ್ಯಾಕ್ ತೆಗೆದ 10 ನಿಮಿಷಗಳ ಕಾಲ ಸೂರ್ಯನ ಕಿರಣಗಳಿಗೆ ನಿಮ್ಮ ಚರ್ಮವನ್ನು  ಒಡ್ಡಬೇಡಿ. ಹಾಗೇ ಫೇಸ್ ಪ್ಯಾಕ್ ತೆಗೆದ  ಕನಿಷ್ಠ 1 ಗಂಟೆಗಳ ಕಾಲ ಯಾವುದೇ ಕ್ರೀಮ್ ಅಥವಾ ಲೋಷನ್ ನ್ನು ಹಚ್ಚಬೇಡಿ.
 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ