ಮುಟ್ಟಿನ ದಿನಗಳಲ್ಲಿ ಮಿಲನ ಹೊಂದುತ್ತೀರಾ? ಹಾಗಿದ್ದರೆ ಇದನ್ನು ಖಂಡಿತಾ ಓದಿ!
ಶುಕ್ರವಾರ, 21 ಜೂನ್ 2019 (09:02 IST)
ಬೆಂಗಳೂರು: ಮುಟ್ಟಿನ ದಿನಗಳಲ್ಲಿ ಲೈಂಗಿಕ ಕ್ರಿಯೆ ನಡೆಸುವುದಕ್ಕೆ ತೊಂದರೆಯಿಲ್ಲ ಎಂದು ಹಲವು ಅಧ್ಯಯನಗಳೇ ಹೇಳಿವೆ. ಹಾಗಿದ್ದರೂ ಈ ಅಪಾಯವನ್ನು ಅಲ್ಲಗಳೆಯುವಂತಿಲ್ಲ.
ಮುಟ್ಟಿನ ದಿನಗಳಲ್ಲಿ ಮಹಿಳೆಯರ ಗುಪ್ತಾಂಗ ಸೂಕ್ಷ್ಮವಾಗಿರುತ್ತದೆ. ಆ ಸಂದರ್ಭದಲ್ಲಿ ರಕ್ತಸ್ರಾವವಾಗುವಾಗ ಲೈಂಗಿಕ ಕ್ರಿಯೆ ನಡೆಸಿದರೆ ಸೋಂಕು ತಗುಲುವ ಅಪಾಯ ಹೆಚ್ಚು. ಅದರಲ್ಲೂ ಋತುಸ್ರಾವದಲ್ಲಿ ಇರುವ ವೈರಸ್ ನಿಂದ ಎಚ್ ಐವಿ ಅಥವಾ ಇತರ ಗುಪ್ತಾಂಗ ರೋಗ ಹರಡುವ ಅಪಾಯವಿದೆ. ಹೀಗಾಗಿ ಋತುಮತಿಯಾದ ದಿನಗಳಲ್ಲಿ ಲೈಂಗಿಕ ಕ್ರಿಯೆ ನಡೆಸುವುದಿದ್ದರೆ ತಪ್ಪದೇ ಕಾಂಡೋಮ್ ಬಳಸುವುದು ಒಳಿತು ಎನ್ನುವುದು ತಜ್ಞರ ಅಭಿಪ್ರಾಯ.