ಬೆಕ್ಕಿನ ಜತೆ ಆಡಲು ಇಷ್ಟವೇ? ಎಚ್ಚರ!

ಸೋಮವಾರ, 26 ಡಿಸೆಂಬರ್ 2016 (09:22 IST)
ಬೆಂಗಳೂರು: ಬೆಕ್ಕು ಎಂದರೆ ಸಾಮಾನ್ಯವಾಗಿ ಎಲ್ಲರ ಇಷ್ಟದ ಸಾಕು ಪ್ರಾಣಿ. ಕೆಲವರು ಜತೆಯಲ್ಲೇ ಹಾಸಿಗೆಯಲ್ಲಿ ಅದನ್ನೂ ಮಲಗಿಸಿಕೊಂಡು ನಿದ್ದೆ ಮಾಡುತ್ತಾರೆ. ಅಷ್ಟೂ ಇಷ್ಟಪಡುವ ಬೆಕ್ಕು ನಿಮಗೆ ಅಪಾಯ ತಂದೊಡ್ಡಬಹುದು.


ನಿಮ್ಮ ಬೆಕ್ಕು ನಿಮಗೆ ಹಕ್ಕಿ ಜ್ವರ ಹರಬಹುದು. ಎಚ್7ಎನ್2 ಎಂಬ ಹಕ್ಕಿ ಜ್ವರ ಹರಡಲು ಬೆಕ್ಕುಗಳು ಕಾರಣವಾಗುತ್ತದಂತೆ. ಅಮೆರಿಕಾದ ಪ್ರಾಣಿ ಸಂಗ್ರಹಾಲಯದಲ್ಲಿ ಇದು ಸಾಬೀತಾಗಿದೆಯಂತೆ. ಈ ಸೋಂಕು ತಗುಲಿದ ಬೆಕ್ಕುಗಳು ಮನುಷ್ಯರಿಗೆ ಇದನ್ನು ಹರಡುತ್ತಿವೆ ಎಂದು ಪತ್ತೆಯಾಗಿದೆ.

ಬೆಕ್ಕುಗಳಿಂದ ಹಕ್ಕಿ ಜ್ವರ ಹರಡುವ ವಿಷಯ ತಿಳಿಯುತ್ತಿದ್ದಂತೆ ಆ ಪ್ರಾಣಿ ಸಂಗ್ರಹಾಲಯದಿಂದ ಬೆಕ್ಕುಗಳನ್ನು ಕೊಂಡು ಹೋದವರಿಗೆ ಎಚ್ಚರವಾಗಿರುವಂತೆ ಸೂಚಿಸಲಾಗಿದೆಯಂತೆ. ಅಂತೂ ಬೆಕ್ಕುಗಳು ಬೇಗನೇ ವೈರಾಣು ಹರಡುತ್ತವೆ ಎಂದು ಮತ್ತೊಮ್ಮೆ ಸಾಬೀತಾದಂತಾಗಿದೆ.

ಉಸಿರಾಟದ ಸಮಸ್ಯೆ ಇರುವವರಿಗೆ ಬೆಕ್ಕಿನ ಜತೆ ಆಡುವುದರಿಂದ ಬೇಗನೇ ಸೋಂಕು ತಗುಲುತ್ತದೆ ಎಂಬ ನಂಬಿಕೆಗಳಿವೆ. ಹೀಗಾಗಿ ಬೆಕ್ಕಿನ ಜತೆ ಚೆಲ್ಲಾಟವಾಡುವವರು ತಮ್ಮ ಪ್ರಾಣದ ಜತೆ ಆಡಿದಂತೆ ಎನ್ನುವುದನ್ನು ಮರೆಯಬಾರದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ