ಮದುವೆಗೆ ಮೊದಲು ಸಂಗಾತಿ ಜೊತೆ ಸೆಕ್ಸ್ ಕುರಿತು ಮಾತನಾಡಿದರೆ ಸಿಗುವ ಲಾಭವೇನು ಗೊತ್ತಾ...?

ಶುಕ್ರವಾರ, 19 ಜನವರಿ 2018 (07:19 IST)
ಬೆಂಗಳೂರು : ಮದುವೆಯಾಗಲಿರುವ ಜೋಡಿ ಪರಸ್ಪರ ಕೈ ಕೈ ಹಿಡಿದುಕೊಂಡು ಸುತ್ತಾಡುವಾಗ ತಮ್ಮ ಭವಿಷ್ಯದ ಬಗ್ಗೆ ಹತ್ತಾರು ಕನಸುಗಳನ್ನು ಕಾಣುತ್ತಾರೆ. ಹಾಗೆ ಅದರ ಜೊತೆ ಸೆಕ್ಸ್ ಬಗ್ಗೆನೂ ಮಾತನಾಡಬೇಕು ಎಂದು ತಜ್ಞರು ಹೇಳುತ್ತಾರೆ.

 
ಜೀವನದಲ್ಲಿ ಜೊತೆ ಜೊತೆಯಾಗಿ ಸಾಗಬೇಕಾದವರು ತಮ್ಮ ಮನೆ, ಆರ್ಥಿಕ ಯೋಜನೆಗಳು, ಇಷ್ಟಕಷ್ಟಗಳ ಬಗ್ಗೆ ಮಾತನಾಡುತ್ತಾರೆ. ಅದರ ಜೊತೆಗೆ ಅವರು ಬಹಳ ಮುಖ್ಯವಾಗಿ ಮಾತನಾಡಬೇಕಿರುವುದು ಸೆಕ್ಸ್ ಲೈಫ್ ಬಗ್ಗೆ. ದಾಂಪತ್ಯ ಜೀವನದ ಬಹುಮುಖ್ಯ ಕೊಂಡಿ ಎಂದರೆ ಅದು ಸೆಕ್ಸ್. ಹೀಗಾಗಿ ಇದರ ಬಗ್ಗೆ ಮಾತನಾಡಲೇಬೇಕು. ನಿಮ್ಮ ಲೈಂಗಿಕ ಜೀವನ ಹೇಗಿರಬೇಕು, ಹೇಗಿದ್ದರೆ ನಿಮಗಿಷ್ಟ, ಎಷ್ಟು ಇರಬೇಕು, ನಿಮ್ಮ ಇಷ್ಟ, ಕಷ್ಟಗಳ ಬಗ್ಗೆ ಪರಸ್ಪರ ಮಾತನಾಡಿಕೊಳ್ಳಬೇಕು. ಆಗ ನಿಮ್ಮ ನಡುವೆ ಇರುವ ಸಂಕೋಚ ದೂರವಾಗುತ್ತದೆ. ಪರಸ್ಪರರ ಇಷ್ಟ ಕಷ್ಟಗಳ ಪರಿಚಯವಾಗುತ್ತದೆ. ಮುಂದಿನ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ ಎಂದು ತಜ್ಞರು ಹೇಳುತ್ತಾರೆ. ಆದರೆ ಏನೇ ಮಾತನಾಡುವುದಾದರೂ ಮಿತಿಮೀರಿ ಸಂಬಂಧ ಹಾಳುಮಾಡಿಕೊಳ್ಳಬಾರದು ಎನ್ನುತ್ತಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ