ಬೆಳಿಗ್ಗೆ ಬೇಗ ಏಳುವುದರ ಲಾಭವೇನು ಗೊತ್ತಾ?

ಶನಿವಾರ, 27 ಮೇ 2017 (11:24 IST)
ಬೆಂಗಳೂರು: ಚುಮು ಚುಮು ಚಳಿಯಿದ್ದರೆ ಸಾಕು, ಬೆಚ್ಚಗೆ ಹೊದ್ದುಕೊಂಡು ಇನ್ನಷ್ಟು ಹೊತ್ತು ಮಲಗಿರೋಣವೆನಿಸುತ್ತದೆ. ಆದರೆ ಸೋಮಾರಿತನ, ಆಲಸ್ಯ ಬಿಟ್ಟು ಬೇಗ ಏಳುವುದನ್ನು ಅಭ್ಯಾಸ ಮಾಡಿಕೊಳ್ಳಿ.

 
ಬೇಗ ಏಳುವ ಅಭ್ಯಾಸ ಮಾಡಿಕೊಂಡರೆ ನಮ್ಮ ದೇಹಕ್ಕೆ ಸಿಗುವ ಲಾಭಗಳು ಹಲವಾರು. ಮುಂಜಾನೆ ವಾತಾವರಣ ಶುದ್ಧವಾಗಿರುತ್ತದೆ. ಶುದ್ಧವಾದ ಗಾಳಿ ಸೇವಿಸಿಕೊಂಡು ಯೋಗ, ವ್ಯಾಯಾಮ ಮಾಡುವುದರಿಂದ ಆರೋಗ್ಯ ವೃದ್ಧಿಸುತ್ತದೆ.

ಈ ಸಂದರ್ಭದಲ್ಲಿ ವಾತಾವರಣ ಪ್ರಶಾಂತವಾಗಿರುವುದರಿಂದ ಏಕಾಗ್ರತೆಯೂ ಹೆಚ್ಚುತ್ತದೆ. ಮೆದುಳಿನ ನರಮಂಡಲಕ್ಕೆ ವೇಗವಾಗಿ ರಕ್ತ ಸಂಚಾರವಾಗಿ, ಚುರುಕಾಗಿ ಕೆಲಸ ಮಾಡುವುದಲ್ಲದೆ, ನೆನಪಿನ ಶಕ್ತಿ ಹೆಚ್ಚುತ್ತದೆ.

ಮುಂಜಾನೆಯ ಸೂರ್ಯನ ಕಿರಣ ಬಿದ್ದಾಗ ಮರ ಗಿಡಗಳಿಂದ ಹೊರಹೊಮ್ಮುವ ಆಮ್ಲಜನಕದ ಸೇವನೆ, ನಮ್ಮ ಹೃದಯ, ಶ್ವಾಸಕೋಶದ ಆರೋಗ್ಯಕ್ಕೆ ಉತ್ತಮ. ಹಾಗಾಗಿಯೇ ನಮ್ಮ ಹಿರಿಯರು ಬೆಳಗ್ಗೆ ಬೇಗನೆ ಏಳುವ ಅಭ್ಯಾಸ ಇಟ್ಟುಕೊಂಡಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ