ಶುಂಠಿ ಹಾಕಿದ ನೀರು ಸೇವಿಸುವುದರ ಲಾಭವೇನು ಗೊತ್ತಾ?

ಸೋಮವಾರ, 15 ಮೇ 2017 (08:35 IST)
ಬೆಂಗಳೂರು: ನೀರು ಕುದಿಸಿ ಅದಕ್ಕೆ ಸ್ವಲ್ಪ ಶುಂಠಿ ಹಾಕಿ, ಜೇನು ತುಪ್ಪ ಅಥವಾ ನಿಂಬೆ ರಸ ಸೇರಿಸಿ ಕುಡಿದು ನೋಡಿ. ಆರೋಗ್ಯಕ್ಕೆ ಏನೇನು ಲಾಭ ಎನ್ನುವುದನ್ನು ಪಟ್ಟಿ ಮಾಡಿ.

 
ಜೀರ್ಣಕ್ರಿಯೆ
ಪ್ರತಿದಿನ ಶುಂಠಿ ಹಾಕಿದ ನೀರು ಸೇವಿಸುವುದರಿಂದ ಜೀರ್ಣಕ್ರಿಯೆ ಸುಗಮವಾಗಿಸುವುದಲ್ಲದೆ, ತಲೆ ಸುತ್ತುವುದು, ಎದೆಯುರಿ ಮುಂತಾದ ಸಮಸ್ಯೆ ನಿವಾರಣೆಯಾಗಬಹುದು. ಅಷ್ಟೇ ಅಲ್ಲದೆ, ಶುಂಠಿ ನೀರಿಗೆ ಸ್ವಲ್ಪ ಪುದಿನಾ ಸೊಪ್ಪು, ಜೇನು ತುಪ್ಪ ಹಾಕಿ ಸೇವಿಸುವುದರಿಂದ ಗರ್ಭಿಣಿಯರಿಗೆ ಬೆಳಗಿನ ಸಂಕಟದಿಂದ ಪಾರಾಗಬಹುದು.

ಮಧುಮೇಹ
ಶುಂಠಿ ಮತ್ತು ನಿಂಬೆ ರಸ ಹಾಕಿದ ನೀರು ಕುಡಿಯುವುದರಿಂದ ಮೂತ್ರಪಿಂಡದ ಸಮಸ್ಯೆ ಮತ್ತು ಮಧುಮೇಹವನ್ನು ದೂರ ಮಾಡಬಹುದು.

ತೂಕ ಇಳಿಸಲು
ಶುಂಠಿ ಹಾಕಿದ ನೀರು ಸಕ್ಕರೆ ಅಂಶ ನಿಯಂತ್ರಿಸುವುದರಿಂದ ಅತಿಯಾಗಿ ಆಹಾರ ಸೇವಿಸುವ ಮೋಹವೂ ಕಡಿಮೆಯಾಗುವುದು. ಇದು ಕೊಬ್ಬು ಹೀರಿಕೊಳ್ಳುವ ಶಕ್ತಿ ವೃದ್ಧಿಸುವುದರಿಂದ ತೂಕ ಇಳಿಕೆಗೆ ಸಹಕಾರಿ.

ಚರ್ಮ ಮತ್ತು ಕೂದಲುಗಳಿಗೆ
ಶುಂಠಿಯಲ್ಲಿರುವ ಪೋಷಕ ಸತ್ವಗಳು ಚರ್ಮವನ್ನು ಕಾಂತಿಯುತವಾಗಿ ಮಾಡುತ್ತದೆ. ಇದರಲ್ಲಿರುವ ವಿಟಮಿನ್ ಎ ಮತ್ತು ಸಿ ಗುಣವು ಕೂದಲುಗಳು ಸೊಂಪಾಗಿ ಬೆಳೆಯಲು ಕಾರಣವಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ