ಪ್ರೊಸ್ಟೇಟ್ ಕ್ಯಾನ್ಸರ್ ಹಾಗೂ ಮಧುಮೇಹ ನಿಯಂತ್ರಣಕ್ಕೆ ಬ್ರೊಕೊಲಿ ಪರಿಹಾರ

ಭಾನುವಾರ, 25 ಜೂನ್ 2017 (16:58 IST)
ಬೆಂಗಳೂರು:ಬ್ರೊಕೊಲಿ, ಕ್ಯಾಬೇಜ್ ಫ್ಯಾಮಿಲಿಗೆ ಸೇರಿದ ಒಂದು ತರಕಾರಿ ಬ್ರೊಕೊಲಿಯಲ್ಲಿ ವಿಟಮಿನ್ ಸಿ,ಡಿ, ಬಿ6, ಬಿ12, ಎ, ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಶಿಯಂ, ಖನಿಜಗಳು, ನಾರಿನಾಂಶ ಮತ್ತು ಆಂಟಿಆಕ್ಸಿಡೆಂಟ್ ಗಳು ಅಧಿಕ ಪ್ರಮಾಣದಲ್ಲಿರುತ್ತವೆ. ಇದು ರಕ್ತದಲ್ಲಿನ ಸಕ್ಕರೆ ಅಂಶವನ್ನು ಕಡಿಮೆಗೊಳಿಸಲು ಒಂದು ಉತ್ತಮ ಆಹಾರ. ಪ್ರೊಸ್ಟೇ ಕ್ಯಾನ್ಸರ್  ನಿಯಂತ್ರಣಕ್ಕೂ ಉತ್ತಮವಾದದ್ದು.
 
ಬ್ರೊಕೋಲಿ ಹೆಚ್ಚೆಚ್ಚು ಸೇವಿಸುವುದರಿಂದ ಪ್ರೊಸ್ಟೇಟ್ ಕ್ಯಾನ್ಸರ್ ಬರುವುದನ್ನು ತಡೆಗಟ್ಟಬಹುದು ಎಂಬುದು ಅಧ್ಯಯನದಿಂದಲೇ ದೃಢಪಟ್ಟಿದೆ. ಜಾಗತಿಕವಾಗಿ ಪುರುಷರು ಅತಿ ಹೆಚ್ಚಿನ ಪ್ರಮಾಣದಲ್ಲಿ ಪ್ರೊಸ್ಟೇಟ್ ಕ್ಯಾನ್ಸರ್ ಗೆ ಒಳಗಾಗುತ್ತಿದ್ದಾರೆ. ಹೀಗಾಗಿ ಬ್ರೊಕೊಲಿ ತರಕಾರಿಯನ್ನು ಹೆಚ್ಚೆಚ್ಚು ಪ್ರಮಾಣದಲ್ಲಿ ಸೇವಿಸುವುದರಿಂದ ಈ ಪ್ರೊಸ್ಟೇಟ್ ಕ್ಯಾನ್ಸರ್ ತಡೆಗಟ್ಟಬಹುದಾಗಿದೆ. ಬ್ರೊಕೊಲಿ ಸೇವನೆಯಿಂದಾಗಿ ಅದರಲ್ಲಿರುವ ಪಥ್ಯಾಹಾರದ ಅಂಶಗಳು ದೀರ್ಘಕಾಲದಲ್ಲಿ ಪ್ರೊಸ್ಟೇಟ್ ಕ್ಯಾನ್ಸರ್ ಬರುವ ಅಪಾಯವನ್ನು ತಡೆಗಟ್ಟುತ್ತದೆ. 
 
ಇನ್ನು ಬ್ರೊಕೊಲಿ ಪದಾರ್ಥ ಸೇವನೆಯಿಂದ ಟೈಪ್‌ 2 ಸಕ್ಕರೆ ಕಾಯಿಲೆ ಇರುವವರಿಗೆ ರಕ್ತದಲ್ಲಿ ಸಕ್ಕರೆ ಅಂಶವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಅಲ್ಲದೇ ಇದು ನೆನಪಿನ ಶಕ್ತಿಯನ್ನು ವೃದ್ಧಿಸುವಲ್ಲಿ ಸಹಕಾರಿಯಾಗಿದೆ.
 

ವೆಬ್ದುನಿಯಾವನ್ನು ಓದಿ