ಮೂಗಿನಲ್ಲಿ ರಕ್ತ ಸೋರಲು ಕಾರಣಗಳೇನು?

ಭಾನುವಾರ, 15 ಅಕ್ಟೋಬರ್ 2017 (08:28 IST)
ಬೆಂಗಳೂರು: ಸಹಜ ಚಟುವಟಿಕೆಯಲ್ಲಿರುವಾಗಲೇ ಇದ್ದಕ್ಕಿದ್ದಂತೆ ಮೂಗಿನಲ್ಲಿ ರಕ್ತ ಸೋರುತ್ತಿದ್ದರೆ ಗಾಬರಿಯಾಗಬೇಕಿಲ್ಲ. ಕೆಲವು ಸಾಮಾನ್ಯ ಕಾರಣಗಳಿಂದ ಮೂಗಿನಲ್ಲಿ ರಕ್ತ ಸೋರುವಿಕೆ ಉಂಟಾಗಬಹುದು.

·         ಪದೇ ಪದೇ ಮೂಗಿಗೆ ಬೆರಳು ಹಾಕುವ ಅಭ್ಯಾಸವಿದ್ದರೆ ಹೀಗಾಗಬಹುದು.
·         ಶೀತ ಅಥವಾ ಅಲರ್ಜಿ ಆದಾಗ ಆಗಾಗ ಸೀನುವುದರಿಂದ, ಮೂಗು ಹಿಂಡುವುದರಿಂದ ರಕ್ತ ಸೋರಬಹುದು.
·         ಶೈತ್ಯಗಾಲದಲ್ಲಿ ಉಂಟಾಗುವ ತೇವಾಂಶ ರಹಿತ ವಾತಾವರಣದಿಂದ ಮೂಗಿನ ತೆಳುವಾದ ಪದರ ಒಡೆದು ರಕ್ತ ಸೋರಬಹುದು.
·         ಮೂಗಿಗೆ ಯಾವುದೋ ಕಾರಣಕ್ಕೆ ಹಾಕುವ ಔಷಧಗಳ ಅಲರ್ಜಿಯಿಂದ ಹೀಗಾಗಬಹುದು.
·         ಮೂಗಿಗೆ ಆದ ಗಾಯ ಅಥವಾ ಸೋಂಕಿನಿಂದ ರಕ್ತ ಸೋರುವಿಕೆ ಆಗಬಹುದು.

 
ಈ ಕಾರಣಗಳಲ್ಲದೇ ರಕ್ತ ಸೋರುವಿಕೆ ಉಂಟಾಗುತ್ತಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಒಳಿತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ