ಬೀಟ್ ರೂಟ್ ಜ್ಯೂಸ್ ಸೇವಿಸಿದರೆ ಆಗುವ ಲಾಭವೇನು?

ಮಂಗಳವಾರ, 10 ಅಕ್ಟೋಬರ್ 2017 (08:29 IST)
ಬೆಂಗಳೂರು: ಬೀಟ್ ರೂಟ್ ಎಂಬ ಗಡ್ಡೆ ತರಕಾರಿ ನಮ್ಮ ದೇಹಕ್ಕೆ ಹಲವು ರೀತಿಯಲ್ಲಿ ಒಳ್ಳೆಯದು. ಅದರ ಜ್ಯೂಸ್ ಮಾಡಿ ಕುಡಿಯುವುದರಿಂದ ಏನೇನು ಲಾಭ ನೋಡೋಣ.

 
ರಕ್ತದೊತ್ತಡ
ರಕ್ತದೊತ್ತಡ ನಿಯಂತ್ರಿಸಲು ಬೀಟ್ ರೂಟ್ ರಸ ಉತ್ತಮ. ಇದರಲ್ಲಿರುವ ನೈಸರ್ಗಿಕ ನೈಟ್ರೇಟ್ ಅಂಶ ರಕ್ತನಾಳಗಳಲ್ಲಿ ನೈಟ್ರಿಕ್ ಆಕ್ಸೈಡ್ ಅಂಶ ಹೆಚ್ಚಿಸಲು ನೆರವಾಗುತ್ತದೆ. ಇದರಿಂದ ನಮ್ಮ ಮೆದುಳು, ಹೃದಯಕ್ಕೆ ಬೇಕಾದಷ್ಟು ರಕ್ತ ಪೂರೈಕೆಯಾಗುತ್ತದೆ.

ಚರ್ಮದ ಕಾಂತಿ
ಬೀಟ್ ರೂಟ್ ನಲ್ಲಿ ರಕ್ತ ಶುದ್ಧೀಕರಿಸುವ ಅಂಶ ಹೆಚ್ಚಿದೆ. ಅಲ್ಲದೆ ಇದರಲ್ಲಿ ವಿಟಮಿನ್ ಸಿ ಅಂಶವೂ ಇದೆ. ಹೀಗಾಗಿ ಇದು ಚರ್ಮದ ಕಾಂತಿ ವೃದ್ಧಿಗೆ ಉತ್ತಮ.

ರೋಗ ನಿರೋಧಕ
ರಕ್ತನಾಳಗಳ ದ್ವಾರ ತೆರೆದುಕೊಳ್ಳುವುದಕ್ಕೆ ಬೀಟ್ ರೂಟ್ ಉತ್ತಮ. ಇದರಿಂದ ದೇಹವಿಡೀ ಆಕ್ಸಿಜನ್ ಪೂರೈಕೆ ಸಾಕಷ್ಟು ಪ್ರಮಾಣದಲ್ಲಿ ಪೂರೈಕೆಯಾಗುತ್ತದೆ. ಅದರಿಂದಾಗಿ ದೇಹಕ್ಕೆ ಬೇಕಾದ ಶಕ್ತಿ ಒದಗುತ್ತದೆ.

ಜೀರ್ಣಕಾರಕ
ಇದರಲ್ಲಿ ಫೈಬರ್ ಅಂಶವೂ ಹೇರಳವಾಗಿರುವುದರಿಂದ ಜೀರ್ಣಕ್ರಿಯೆಗೂ ಒಳ್ಳೆಯದು. ಅಲ್ಲದೆ, ಮಲಬದ್ಧತೆ ಇರುವವರಿಗೂ ಇದರ ಸೇವನೆ ಉತ್ತಮ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ