ಮಕ್ಕಳ ಹೊಟ್ಟೆ ಹುಳಕ್ಕೆ ಕಾರಣವಾಗುವ ಅಂಶಗಳು ಯಾವುವು?

ಶುಕ್ರವಾರ, 24 ಫೆಬ್ರವರಿ 2017 (10:10 IST)
ಬೆಂಗಳೂರು: ಚಾಕಲೇಟ್ ಜಾಸ್ತಿ ತಿನ್ನಬೇಡ.. ಹಲ್ಲು ಹಾಳಾಗುತ್ತದೆ. ಹೊಟ್ಟೆಯಲ್ಲಿ ಜಂತು ಹುಳ ಬರುತ್ತದೆ.. ಹೀಗೆ ಮಕ್ಕಳನ್ನು ಭಯಪಡಿಸುತ್ತೇವೆ. ಅಸಲಿಗೆ ಮಕ್ಕಳ ಜಂತು ಹುಳ ಸಮಸ್ಯೆಗೆ ಕಾರಣವಾಗುವ ಅಂಶಗಳು ಇವಿಷ್ಟೇ ಅಲ್ಲ.

 
ಮಕ್ಕಳು ಸರಿಯಾಗಿ ಊಟ ಮಾಡದೇ ಇರುವುದು, ಅನಿಮೀಯಾ, ಚರ್ಮದಲ್ಲಿ ಬೀಳುವ ಸಣ್ಣ ಗುಳ್ಳೆಗಳು, ಹೊಟ್ಟೆ ನೋವು, ಗುದ ದ್ವಾರದಲ್ಲಿ ತುರಿಕೆ, ಸರಿಯಾಗಿ ನಿದ್ರೆಯಿಲ್ಲದೇ ಇರುವುದು… ಇವೆಲ್ಲಾ ಜಂತು ಹುಳ ಸಮಸ್ಯೆಯ ಲಕ್ಷಣಗಳು.

ಸಿಹಿ ಜಾಸ್ತಿ ತಿಂದರೆ ಮಕ್ಕಳಿಗೆ ಈ ಸಮಸ್ಯೆ ಬೇಗ ಬರುತ್ತದೆ ಎಂಬ ನಂಬಿಕೆಯಿದೆ. ಹಾಗಾಗಿ ಮಕ್ಕಳಿಗೆ ಸಕ್ಕರೆ ವಿಪರೀತ ಅಭ್ಯಾಸ ಮಾಡಿಸಬೇಡಿ ಎಂದು ಹಿರಿಯರು ಹೇಳುತ್ತಲೇ ಇರುತ್ತಾರೆ. ಇದಕ್ಕಿಂತ ಮುಖ್ಯವಾದ ಕಾರಣ ಎಂದರೆ ನಾವು ತಿನ್ನುವ ಆಹಾರ. ತರಕಾರಿ ಹಣ್ಣುಗಳನ್ನು ಸರಿಯಾಗಿ ತೊಳೆಯದೇ ನೀಡುವುದರಿಂದಲೂ ಹೊಟ್ಟೆ ಹುಳದ ಸಮಸ್ಯೆ ಕಾಣಿಸಿಕೊಳ್ಳಬಹುದು.

ಮಕ್ಕಳು ಮಣ್ಣಿನಲ್ಲಿ ಆಡುವುದು ಸಹಜ. ಕೊಳಕು ಮಣ್ಣಿನಲ್ಲಿ ಆಡುವಾಗ ಅದು ಉಗುರಿನ ನಡುವೆ ಸಿಲುಕಿಕೊಂಡು ಸರಿಯಾಗಿ ತೊಳೆದುಕೊಳ್ಳದೇ ಇದ್ದಾಗ, ಆಹಾರದ ಮೂಲಕ ಹೊಟ್ಟೆ ಸೇರುತ್ತದೆ. ಇದು ಹೊಟ್ಟೆ ಹುಳದ ಸಮಸ್ಯೆ ಕಾರಣವಾಗುತ್ತದೆ. ಹಾಗಾಗಿ ಮಕ್ಕಳಿಗೆ ಯಾವ ಆಹಾರ ನೀಡುತ್ತೇವೆ ಎಂದು ಎಷ್ಟು ಮುಖ್ಯವೋ, ಅದನ್ನು ಎಷ್ಟು ಶುಚಿಗೊಳಿಸಿ ನೀಡುತ್ತೇವೆ ಮತ್ತು ತಿನ್ನುವ ಮೊದಲು ಮಕ್ಕಳ ಕೈ ಬಾಯಿ ಶುಚಿಯಾಗಿದೆಯೇ ಎಂದು ಗಮನಿಸುವುದೂ ಅಷ್ಟೇ ಮುಖ್ಯ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ