ಬಿಪಿ ಮಾತ್ರೆ ತೆಗೆದುಕೊಂಡರೆ ಕ್ಯಾನ್ಸರ್ ಹರಡಲ್ವಂತೆ!

ಸೋಮವಾರ, 19 ಡಿಸೆಂಬರ್ 2016 (10:24 IST)
ಬೆಂಗಳೂರು: ರಕ್ತದೊತ್ತಡಕ್ಕೆ ತೆಗೆದುಕೊಳ್ಳುವ ಕೆಲವು ಮಾತ್ರೆಗಳನ್ನು ಸೇವಿಸಿದರೆ ಕ್ಯಾನ್ಸರ್ ವೈರಾಣುಗಳು ಹರಡೋದಿಲ್ಲ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.

ರಕ್ತದೊತ್ತಡಕ್ಕೆ ನೀಡುವ ಚಿಕಿತ್ಸೆಯಿಂದ ಇಂತಹದ್ದೊಂದು ಉಪಯೋಗವಿದೆ ಎಂದು ಇದೇ ಮೊದಲ ಬಾರಿಗೆ ಕಂಡುಕೊಳ್ಳಲಾಗಿದೆ. ಫಿನ್ ಲ್ಯಾಂಡ್ ನ ಸಂಶೋಧಕರ ತಂಡ ಈಗಾಗಲೇ ಇರುವ ಔಷಧಿಗಳ ಮೇಲೆ ಪ್ರಯೋಗ ನಡೆಸಿ ಈ ಫಲಿತಾಂಶ ಕಂಡುಕೊಂಡಿದೆ. ಅವರ ಪ್ರಕಾರ ಈ ಔಷಧಗಳಿಂದ ಸ್ತನ ಕ್ಯಾನ್ಸರ್ ಮತ್ತು ಮೇದೋಜೀರಕ ಗ್ರಂಥಿಗೆ ಬರುವ ಕ್ಯಾನ್ಸರ್ ಅಪಾಯ ಕಡಿಮೆಯಂತೆ.

ಕ್ಯಾನ್ಸರ್ ಕಣಗಳ ಚಲನೆ ಬಗ್ಗೆ ಅಧ್ಯಯನ ನಡೆಸುವಾಗ ಸಂಶೋಧಕರಿಗೆ ಇಂತಹದ್ದೊಂದು ವಿಶೇಷ ಸಂಗತಿ ಬೆಳಕಿಗೆ ಬಂದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ