ಕೊತ್ತಂಬರಿ ಬೀಜದ ಕಷಾಯದಿಂದ ಏನೇನು ಆಗುತ್ತೆ ನೋಡಿ

ಗುರುವಾರ, 23 ಮಾರ್ಚ್ 2017 (12:17 IST)
ಬೆಂಗಳೂರು: ಮನೆಯಲ್ಲಿ ಹಿರಿಯರಿದ್ದರೆ, ಸಣ್ಣ ಪುಟ್ಟ ಸಮಸ್ಯೆಗಳಿಗೆಲ್ಲಾ ಅದು ಇದು ಕಷಾಯ ಮಾಡಿ ಕುಡಿಯಲು ಸಲಹೆ ಕೊಡುತ್ತಾರೆ. ಕೊತ್ತಂಬರಿ ಕಷಾಯ ಕೂಡಾ ಹಲವು ಸಾಮಾನ್ಯ ರೋಗಗಳಿಗೆ ಮದ್ದು.


 
ಕೊತ್ತಂಬರಿ ಬೀಜವನ್ನು ಎಣ್ಣೆ ಹಾಕದರೆ ಬಿಸಿ ಮಾಡಿಕೊಂಡು ಮಿಕ್ಸಿಯಲ್ಲಿ ಹುಡಿ ಮಾಡಿಟ್ಟುಕೊಂಡರೆ, ಬೇಕೆಂದಾಗ ಅದನ್ನು ಕಷಾಯ ಮಾಡಿ ಕುಡಿಯಬಹುದು. ಅದು ದೇಹಕ್ಕೆ ತಂಪು ನೀಡುತ್ತದೆ.

 
ಅಸಿಡಿಟಿ ಸಮಸ್ಯೆಯಿದ್ದವರು, ಕಾಫಿ, ಚಹಾ ಸೇವಿಸುವ ಬದಲು ಕೊತ್ತಂಬರಿ ಬೀಜದ ಕಷಾಯ ಕುಡಿದರೆ ಒಳ್ಳೆಯದು. ಇನ್ನು, ಉರಿಮೂತ್ರ ಸಮಸ್ಯೆಯಿದ್ದರೂ, ಕೊತ್ತಂಬರಿ ಕಷಾಯ ಉತ್ತಮ ಮನೆ ಔಷಧ.

 
ಅದಲ್ಲದೆ, ಅನಿಯಮಿತ ಮುಟ್ಟು ಆಗುತ್ತಿದ್ದರೆ, ಮುಟ್ಟಿನ ಸಂದರ್ಭದಲ್ಲಿ ವಿಪರೀತ ಹೊಟ್ಟೆ ನೋವು ಬರುತ್ತಿದ್ದರೆ, ಮುಟ್ಟಾಗುವುದಕ್ಕಿಂತ ಒಂದು ವಾರ ಮುಂಚೆ ಪ್ರತಿದಿನ ಕೊತ್ತಂಬರಿ ಕಷಾಯ ಮಾಡಿ ಕುಡಿದು ನೋಡಿ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ