ಬೆಂಗಳೂರು: ಎಷ್ಟೇ ಪ್ರಯತ್ನಪಟ್ಟರೂ ಮಗುವಾಗುತ್ತಿಲ್ಲವೆಂಬ ಚಿಂತೆಯೇ? ಹಾಗಿದ್ದರೆ ಮಹಿಳೆಯರು ಮಿಲನದ ಬಳಿಕ ಕೆಲವೊಂದು ನಿಯಮಗಳನ್ನು ಪಾಲಿಸಲೇಬೇಕು.
ಸಾಮಾನ್ಯವಾಗಿ ಅಂಡಾಣು ಬಿಡುಗಡೆಗೆ ಒಂದು ದಿನ ಮೊದಲಿನಿಂದ ಪ್ರಾರಂಭವಾಗಿ ಬಿಡುಗಡೆಯಾಗುವ ಸಮಯದಲ್ಲಿ ನಿರಂತರವಾಗಿ ಲೈಂಗಿಕ ಸಂಪರ್ಕ ಮಾಡಿದಲ್ಲಿ ಗರ್ಭಿಣಿಯಾಗುವ ಸಾಧ್ಯತೆ ಹೆಚ್ಚು. ಆದರೆ ಮಿಲನದ ಬಳಿಕ ಕನಿಷ್ಠ ಒಂದು ಗಂಟೆ ಹಾಸಿಗೆಯಿಂದ ಎದ್ದೇಳಬಾರದು. ಬಿಸಿನೀರಿನ ಸ್ನಾನ, ಬಾತ್ ಟಬ್ ನಲ್ಲಿ ಗಂಟೆಗಟ್ಟಲೆ ಕೂರುವುದು ಮಾಡಬಾರದು.
ಅದಲ್ಲದೆ ಮಿಲನ ಕ್ರಿಯೆ ಬಳಿಕ ಮೊಣಕಾಲನ್ನು ಕೊಂಚ ಮೇಲೆತ್ತಿಟ್ಟರೆ ಉತ್ತಮ. ಆದರೆ ಮೊಣಕಾಲನ್ನು ಹೊಟ್ಟೆ ಬಳಿಗೆ ಮಡಚಿಟ್ಟುಕೊಂಡು ಕೂರುವುದು, ಮಲಗುವುದು ಮಾಡಿದರೆ ಯಾವುದೇ ಪ್ರಯೋಜನವಾಗದು.