ಬೆಂಗಳೂರು: ನಾನು 25 ವರ್ಷದ ಮಹಿಳೆ. ನನ್ನ ಗಂಡ ಎಷ್ಟೇ ಲೈಂಗಿಕ ಸಮಾಗಮದ ಸಂದರ್ಭದಲ್ಲಿ ಎಷ್ಟೇ ರಮಿಸಿದರೂ ನನಗೆ ಪರಾಕಾಷ್ಠೆ ತಲುಪಲು ಸಾಧ‍್ಯವಾಗುವದಿಲ್ಲ. ಇದಕ್ಕೆ ಏನು ಪರಿಹಾರ?
ಸಾಮಾನ್ಯವಾಗಿ ಮಹಿಳೆಯರು ಲೈಂಗಿಕ ಪರಾಕಾಷ್ಠೆ ತಲುಪಿದಂತೆ ನಾಟಕ ಮಾಡುತ್ತಾರೆ ಎಂದು ಅಧ್ಯಯನಗಳೇ ಹೇಳುತ್ತವೆ. ಇದಕ್ಕೆ ನೀವು ಮಾಡಬೇಕಿರುವುದು ಇಷ್ಟೇ. ಏಕಾಂತದಲ್ಲಿದ್ದಾಗ ಒಮ್ಮೆ ಆತ್ಮರತಿ ಮಾಡಿಕೊಂಡು ನಿಮಗೆ ನಿಮ್ಮ ದೇಹದ ಯಾವ ಭಾಗವನ್ನು ಸ್ಪರ್ಶಿಸಿದರೆ ಹೆಚ್ಚು ಉದ್ರೇಕ, ಸಂತೋಷ ಸಿಗುತ್ತದೆ ಎಂಬುದನ್ನು ಅರಿತುಕೊಳ್ಳಿ. ಈ ರೀತಿ ಸ್ವಯಂ ಪರೀಕ್ಷೆ ಮಾಡುವುದರಿಂದ ನಿಮಗೆ ಯಾವುದು ಹೆಚ್ಚು ಸಂತೋಷ ಕೊಡುತ್ತದೆ ಎನ್ನುವುದು ತಿಳಿದುಕೊಳ್ಳಬಹುದು.