ಮದುವೆಯಾಗಿ 2 ವರ್ಷಗಳಾದರೂ ಹೆಂಡತಿ ರತಿಕ್ರೀಡೆ ಆಡಲು ಇಚ್ಛಿಸುತ್ತಿಲ್ಲ
ಗುರುವಾರ, 26 ಡಿಸೆಂಬರ್ 2019 (07:10 IST)
ಬೆಂಗಳೂರು : ಪ್ರಶ್ನೆ ; ನಾನು 32 ವರ್ಷದ ವ್ಯಕ್ತಿ. ಮದುವೆಯಾಗಿ 2 ವರ್ಷಗಳಾಗಿವೆ. ಆದರೆ ನಾನು ಇನ್ನೂ ಲೈಂಗಿಕ ಸಂಬಂಧ ಹೊಂದಿಲ್ಲ. ಕಾರಣ ನನ್ನ ಹೆಂಡತಿ ತುಂಬಾ ನಾಚಿಕೆ ಪಡುತ್ತಾಳೆ. ಈ ಕೃತ್ಯಕ್ಕೆ ಆಕೆ ಸ್ಪಂದಿಸುತ್ತಿಲ್ಲ. ನಾನು ಅದರ ಬಗ್ಗೆ ಅವಳೊಂದಿಗೆ ಮಾತನಾಡಿದರೆ ನನಗೆ ಸ್ವಲ್ಪ ಸಮಯಬೇಕು ಎಂದು ಹೇಳುತ್ತಾಳೆ. ಇದರಿಂದ ನನಗೆ ತುಂಬಾ ನಿರಾಶೆಯಾಗಿದೆ. ನನಗೆ ಸೋಂಕು ತಗುಲುವ ಭಯಕ್ಕೆ ಲೈಂಗಿಕ ಕಾರ್ಯಕರ್ತರ ಜೊತೆ ಸಂಬಂಧ ಬೆಳೆಸಲು ಇಷ್ಟವಿಲ್ಲ. ಇದಕ್ಕೆ ನಾನು ಏನು ಮಾಡಲಿ?
ಉತ್ತರ : ನಿಮ್ಮ ಪತ್ನಿ ನಿಮ್ಮ ಬಳಿ ಈ ಬಗ್ಗೆ ಸಮಯಾವಕಾಶ ಕೇಳುತ್ತಿರುವುದು ತುಂಬಾ ವಿಷಾದಕರವಾಗಿದೆ. ನಿಮ್ಮ ಹೆಂಡತಿಯ ಸಂಕೋಚವನ್ನು ತೊಡೆದುಹಾಕಲು, ಮತ್ತು ಆಕೆಯ ಮನವೊಲಿಸಲು ನಿಮ್ಮ ಕಡೆಯಿಂದ ಅಪಾರ ಪ್ರಮಾಣದ ಶ್ರಮ ಮತ್ತು ತಾಳ್ಮೆ ಅಗತ್ಯವಿರುತ್ತದೆ. ಅವಳ ಮನಸ್ಸಿನಲ್ಲಿರುವ ಭಯಗಳು ಏನೇ ಇರಲಿ ಅದರ ಬಗ್ಗೆ ಗಮನಹರಿಸಬೇಕಾಗಿದೆ. ನೀವು ಆಕೆಯ ಆಪ್ತ ಸ್ನೇಹಿತರೊಡನೆ ಮಾತನಾಡಿಸಿ ಈ ಬಗ್ಗೆ ಮಾರ್ಗದರ್ಶನ ನೀಡಲು ತಿಳಿಸಿ. ಮತ್ತು ಮಹಿಳಾ ಮನಶಾಸ್ತ್ರಜ್ಞರನ್ನು ಭೇಟಿ ಮಾಡಿ ಇದರಿಂದ ಆಕೆಯ ಮನಸ್ಸಿನಲ್ಲಿ ಏನಿದೆ ಎಂಬುದನ್ನು ಅವರು ಅರಿತು ಇದಕ್ಕೆ ಪರಿಹಾರ ಸೂಚಿಸುತ್ತಾರೆ.