ಲೈಂಗಿಕ ಕ್ರಿಯೆ ನಡೆಸುವುದು ಋತುಬಂಧವನ್ನು ವಿಳಂಬಗೊಳಿಸುತ್ತದೆಯೇ?
ಭಾನುವಾರ, 16 ಫೆಬ್ರವರಿ 2020 (07:42 IST)
ಬೆಂಗಳೂರು : ಪ್ರಶ್ನೆ : ಆಗಾಗ ಲೈಂಗಿಕ ಕ್ರಿಯೆ ನಡೆಸುವುದು ಋತುಬಂಧವನ್ನು ವಿಳಂಬಗೊಳಿಸುತ್ತದೆಯೇ? ಋತುಬಂಧ ಹೊಂದಲು ಮಹಿಳೆಯರಿಗೆ ಸರಿಯಾದ ವಯಸ್ಸು ಯಾವುದು? ಮಹಿಳೆಯರು 50ನೇ ವಯಸ್ಸಿನಲ್ಲಿ ಲೈಂಗಿಕತೆಯನ್ನು ಕಡಿಮೆ ಮಾಡಿದರೆ ಶೀಘ್ರದಲ್ಲಿಯೇ ಋತುಬಂಧವಾಗುತ್ತದೆ ಎಂದು ನಾನು ತಿಳಿದುಕೊಂಡಿರುವೆ. ಇದು ನಿಜನಾ?
ಉತ್ತರ :ಋತುಬಂಧವೆಂದರೆ ಮುಟ್ಟು ಸಾಸ‍್ವತವಾಗಿ ನಿಲ್ಲುವುದು. ಆಗ ಮಹಿಳೆ ಮಕ್ಕಳನ್ನು ಹೊಂದಲು ಆಗುವುದಿಲ್ಲ. ಆರು ತಿಂಗಳಿನಿಂದ 1 ವರ್ಷದವರೆಗೆ ಮಹಿಳೆ ಮುಟ್ಟಾಗದಿದ್ದರೆ ಆಕೆ ಋತುಬಂಧಕ್ಕೆ ತಲುಪಿದ್ದಾಳೆ ಎಂದರ್ಥ. ಹೆಚ್ಚಿನ ಮಹಿಳೆಯರ ಆರೋಗ್ಯ ಮತ್ತು ಲೈಂಗಿಕ ಸಾಮರ್ಥ್ಯವನ್ನು ಅವಲಂಬಿಸಿ 45 ರಿಂದ 55 ವರ್ಷದೊಳಗೆ ಮಹಿಳೆ ಋತುಬಂಧಕ್ಕೊಳಗಾಗುತ್ತಾಳೆ.
ಮಹಿಳೆ ಋತುಬಂಧ ಹೊಂದಿದ 1 ವರ್ಷಗಳಲ್ಲಿ ಲೈಂಗಿಕತೆಯ ಆನಂದ ಹೆಚ್ಚುತ್ತದೆ. ನಿಯಮಿತವಾಗಿ ಇದು ಕಡಿಮೆಯಾಗುತ್ತದೆ.