ನಾನು ನಿರೋಧ್ ಬಳಸಿದ್ದೆ - ಅವಳು ಗರ್ಭಿಣಿಯಾಗಿದ್ದು ಯಾರಿಂದ?

ಶನಿವಾರ, 23 ನವೆಂಬರ್ 2019 (14:12 IST)
ಪ್ರಶ್ನೆಸರ್. ಅವಳು - ನಾನು ಒಂದೇ ಕಾಲೋನಿಯಲ್ಲಿದ್ದೇವೆ. ಅವಳೊಂದಿಗೆ ಪರಮ ಸುಖ ಅನುಭವಿಸಿದ್ದೇನೆ.

ಪರಿಚಯವಾಗಿ ಕೆಲವೇ ದಿನಗಳಲ್ಲಿ ನನ್ನನ್ನು ಪ್ರೀತಿಸೋದಾಗಿ ಅವಳೇ ಪ್ರಪೋಸ್ ಮಾಡಿದ್ದಳು. ಆ ಬಳಿಕ ನಾವಿಬ್ಬರೂ ಆಕೆಯ ಮನೆಯಲ್ಲಿ ಯಾರೂ ಇಲ್ಲದಾಗ ಹಲವು ಸಲ ಸೇರಿ ಸುಖಿಸಿದ್ದೇವೆ. ನಾನು ನಿರೋಧ್ ಧರಿಸಿದ್ದೆ.

ಆದರೆ ಇದಾಗಿ ಮೂರ್ನಾಲ್ಕು ತಿಂಗಳಾಗಿವೆ. ಆದರೆ ಆ ಹುಡುಗಿ ಈಗ ನಾನು ನಿನ್ನ ಕಾರಣದಿಂದಲೇ ಗರ್ಭಿಣಿಯಾಗಿದ್ದೇನೆ ಎನ್ನುತ್ತಿದ್ದಾಳೆ. ನನಗೆ ಚಿಂತೆ ಕಾಡುತ್ತಿದೆ.

ಉತ್ತರ: ನೀವು ಮನೆಸಾರೆ ಅವಳನ್ನು ಪ್ರೀತಿ ಮಾಡಿದ್ದೀರಿ ಇಲ್ಲವೋ ಎಂಬುದನ್ನು ಬರೆದಿಲ್ಲ. ಆದರೂ ನೀವು ಮಾಡಿದ್ದು ಸರಿ ಅಲ್ವೇ ಅಲ್ಲ. ತಪ್ಪು ನಿಮ್ಮದೋ ಅವರದೋ ಎಂಬುದು ಗೊತ್ತಿಲ್ಲ. ಇಬ್ರೂ ಇಲ್ಲಿ ತಪ್ಪು ಮಾಡಿದ್ದೀರಿ. ಯುವತಿಯೊಬ್ಬಳು ಗರ್ಭ ಧರಿಸೋಕೆ ನಿರ್ಧಿಷ್ಟ ದಿನಗಳು ಇರುತ್ತವೆ. ಮಂಥ್ಲಿ ಪಿರಿಯೆಡ್ ಆದ ಹತ್ತರಿಂದ ಹದಿನೈದು ದಿನಗಳ ಒಳಗೆ ನೀವು ಅವಳೊಂದಿಗೆ ಸೇರಿದ್ದರೆ ಆಗ ಮಕ್ಕಳಾಗುವ ಸಾಧ್ಯತೆ ಹೆಚ್ಚಿರುತ್ತದೆ.

ಗರ್ಭಿಣಿಯಾಗುವುದು ಪುರುಷ ಮತ್ತು ಮಹಿಳೆಯರ ಉತ್ತಮವಾದ ಸ್ಫರ್ಮ್ ಮೇಲೆ ಅವಲಂಬಿತವಾಗಿರುತ್ತದೆ. ನಿಮ್ಮ ಕಾರಣಕ್ಕೆ ಅವಳು ಹಾಗೆ ಆಗಿದ್ದರೆ ಅವಳನ್ನು ಮದುವೆಯಾಗಿ ಬಾಳು ಕೊಡಿ. ಆಕೆಯ ಮೇಲೆ ನಿಮಗೆ ಅನುಮಾನವಿದ್ದರೆ ವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆದುಕೊಳ್ಳಿ. ಅವಳೊಂದಿಗೆ ಸುಖಿಸೋವಾಗ ಇರದ ಚಿಂತೆ ಈಗ ಏಕೆ ಮಾಡುತ್ತಿರುವಿರಿ?. ನೀವು ನಿರೋಧ್ ಧರಿಸಿದ್ದರೆ ಅದು ಗುಣಮಟ್ಟದ್ದು ಆಗಿದೆಯಾ? ಇಲ್ಲವೋ ಎಂಬುದನ್ನು ಪರೀಕ್ಷೆ ಮಾಡಿಕೊಳ್ಳಬೇಕಿತ್ತು. ಹಾಗೆ ಆ ಹುಡುಗಿ ಬೇರೆ ಯಾರ ಜೊತೆ ಹಾಸಿಗೆ ಸಹವಾಸಕ್ಕೆ ಹೋಗಿದ್ದಾರಾ, ಇಲ್ಲವೇ ಎಂಬುದನ್ನು ತಿಳಿದುಕೊಂಡು ಹೆಜ್ಜೆ ಇಡಿ.







ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ