ಪುರುಷರಿಗೆ ಯಾವುದೇ ಭಂಗಿಯಲ್ಲಿ ಸಂಭೋಗ ಮಾಡಿದರು ಪರಾಕಾಷ್ಠೆ ಅರ್ಥಾತ್ ಸ್ಖಲನ ಉಂಟಾಗುತ್ತದೆ. ಆದರೆ ಎಲ್ಲಾ ಹೆಂಗಸರಿಗೆ ಆ ಭಾಗ್ಯ ಇರುವುದಿಲ್ಲ.
ಮಹಿಳೆಯರು ಕೆಲವೊಂದು ಭಂಗಿಗಳಲ್ಲಿ ಮಾತ್ರ ಪರಾಕಾಷ್ಠೆ ತಲುಪುತ್ತಾರೆ. ಪರಾಕಾಷ್ಠೆಯ ಬಗ್ಗೆ ನಿಮ್ಮ ಮಹಿಳಾ ಸಂಗಾತಿ ಯಾವ ಅಭಿಪ್ರಾಯ ಹೊಂದಿದ್ದಾರೆ ಎಂಬುದನ್ನು ಮೊದಲು ತಿಳಿದುಕೊಳ್ಳಿ.
ನಿಮ್ಮ ಸಂಗಾತಿ ಮೊದಲು ಪರಾಕಾಷ್ಠೆ ತಲುಪಲು ಅವಕಾಶ ಮಾಡಿಕೊಡಿ. ಮಹಿಳೆಯರ ಗುಪ್ತಾಂಗಗಳನ್ನು ಯಾವ ರೀತಿಯಲ್ಲಿ ಸಂವೇದನೆಗೆ ಒಳಪಡಿಸಬೇಕು ಎಂದು ತಿಳಿದ ವ್ಯಕ್ತಿಗೆ ತನ್ನ ಸಂಗಾತಿಯನ್ನು ಪರಾಕಾಷ್ಠೆ ತಲುಪಿಸುವುದು ತುಂಬ ಸುಲಭದ ಕೆಲಸ. ಇದಕ್ಕಾಗಿ ಬೇರೆ ಬೇರೆ ಭಂಗಿಗಳಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗುವ ಮೂಲಕ ನೀವು ನಿಮ್ಮ ಸಂಗಾತಿಯನ್ನು ಪರಾಕಾಷ್ಠೆಗೆ ಹೇಗೆ ತಲುಪಿಸುವುದು ಎಂಬುದನ್ನು ತಿಳಿದುಕೊಳ್ಳಬಹುದು. ಕೆಲವು ಮಹಿಳೆಯರು ಹಲವಾರು ಭಂಗಿಗಳಲ್ಲಿ ಮುಂಕೇಳಿ (ಫೋರ್‌ಪ್ಲೇ) ಆಡಿದಾಗ ಹೆಚ್ಚು ಹೆಚ್ಚು ಪರಾಕಾಷ್ಠೆಗೆ ತಲುಪುತ್ತಾರೆ.
ನಮ್ಮ ಸಾಂಪ್ರದಾಯಿಕ ಔಷಧ ಪದ್ಧತಿಯು ಒಂದು ಅಂಗ ಮತ್ತೊಂದು ಅಂಗದ ಜೊತೆಗೆ ಸಂಬಂಧವನ್ನು ಹೊಂದಿದೆ ಎಂದು ತಿಳಿಸುತ್ತದೆ. ಲೈಂಗಿಕ ಕ್ರಿಯೆಯು ಇದಕ್ಕೆ ಸ್ಪಷ್ಟ ನಿದರ್ಶನವನ್ನು ಒದಗಿಸುತ್ತದೆ. ಪುರುಷರ ಗುಪ್ತಾಂಗ ನಿಮಿರುವಿಕೆಗೆ ಮತ್ತು ಮಹಿಳೆಯ ಗುಪ್ತಾಂಗ ಒದ್ದೆಯಾಗಲು ಇತರೆ ಅಂಗಗಳನ್ನು ಮುದ್ದಿಸುವುದು, ಚುಂಬಿಸುವುದು ಮಾಡಬೇಕಾಗುತ್ತದೆ.
ದೇಹದ ನಾನಾ ಭಾಗಗಳು ಲೈಂಗಿಕ ಕ್ರಿಯೆಗೆ ನೇರವಾಗಿ ಮತ್ತು ಪರೋಕ್ಷವಾಗಿ ನೆರವನ್ನು ನೀಡುತ್ತವೆ. ಭಂಗಿ ಬದಲಾವಣೆಯಿಂದ ಈ ಅಂಶವನ್ನು ಚೆನ್ನಾಗಿ ಅರಿತುಕೊಳ್ಳಬಹುದು ಮತ್ತು ಇತರೆ ಅಂಗಗಳ ಸಹಕಾರವನ್ನು ಸಹ ಪಡೆಯಬಹುದು.