ಈ ವೇಳೆ ಸಂಭೋಗ ಮಾಡಿದರೆ ಗರ್ಭಿಣಿ ಆಗ್ತೀನಾ?

ಶನಿವಾರ, 21 ಡಿಸೆಂಬರ್ 2019 (14:04 IST)
ಪ್ರಶ್ನೆ: ನಾನು ಮದುವೆಯಾಗಿ ಐದು ವರ್ಷಗಳಾಗಿವೆ. ಮದುವೆಯಾದಾಗಿನಿಂದಲೂ ನನಗೆ ಮಗು ಬೇಕು ಎಂದು ಪ್ರಯತ್ನಿಸುತ್ತಿರುವೆ. ಆದರೆ ನನ್ನ ಕಿಡ್ನಿಯಲ್ಲಿ ಸ್ಟೋನ್ ಗಳಿವೆ. ಒಂದು ವೇಳೆ ನಾನು ಈಗ ಗರ್ಭ ಧರಿಸಿದಲ್ಲಿ ಕಿಡ್ನಿ ಸ್ಟೋನ್ ನಿಂದ ನೋವು ಹೆಚ್ಚಾಗಿ ಅದು ಹುಟ್ಟಲಿರುವ ಮಗುವಿನ ಮೇಲೆ ಪರಿಣಾಮ ಬೀರುತ್ತದೆಯೇ?  ಈ ವೇಳೆ ಸಂಭೋಗ ಮಾಡಬಹುದೇ? ಉತ್ತರಿಸಿ.

ಉತ್ತರ: ಮದುವೆಯಾದ ಮೇಲೆ ಮಗುವಿಗೆ ಹಂಬಲಿಸುವುದು ಸಹಜ ಮಹಿಳೆಯ ಧರ್ಮವಾಗಿದೆ. ನಿಮ್ಮ ವಯಸ್ಸನ್ನು ತಿಳಿಸಿಲ್ಲ ಅಲ್ಲದೇ ಕಿಡ್ನಿ ಸ್ಟೋನ್ ಗಳ ಗಾತ್ರ ಬಗ್ಗೆ ಸ್ಪಷ್ಟತೆ ಇಲ್ಲ. ಕಿಡ್ನಿ ಸ್ಟೋನ್ ಗಾತ್ರದಲ್ಲಿ ದೊಡ್ಡದಾಗಿದ್ದರೆ ಆಗ ನೀವು ಗರ್ಭಿಣಿಯಾದಲ್ಲಿ ತೊಂದರೆ ಎದುರಿಸುವ ಸಾಧ್ಯತೆ ಹೆಚ್ಚಿರುತ್ತದೆ.

ಏಕೆಂದರೆ ಗರ್ಭಿಣಿಯರಿಗೆ ಕ್ಯಾಲ್ಶಿಯಂ ಸೇವನೆಗೆ ಸಲಹೆ ಮಾಡುತ್ತಾರೆ. ಹೀಗಾಗಿ ನೀವು ಮೊದಲಿಗೆ ಕಿಡ್ನಿಸ್ಟೋನ್ ಗಳನ್ನು ರಿಮೂವ್ ಮಾಡಿಕೊಳ್ಳಿ. ಲೇಸರ್ ಇಲ್ಲವೇ ಆಪರೇಷನ್ ಮೂಲಕ ಕಿಡ್ನಿ ಸ್ಟೋನ್ ಹೊರತೆಗೆಯಬಹುದಾಗಿದೆ. ಅದಾದ ಬಳಿಕವಷ್ಟೇ ನೀವು ಗರ್ಭ ಧರಿಸಿದರೆ ಹುಟ್ಟಲಿರುವ ಮಗುವಿಗೆ ಯಾವುದೇ ಆತಂಕ ಎದುರಾಗುವುದಿಲ್ಲ. ಲೈಂಗಿಕ ಕ್ರಿಯೆ ನಡೆಸುವುದಕ್ಕೆ ಯಾವುದೇ ಅಡ್ಡಿಯಿಲ್ಲ. ಯಾವುದಕ್ಕೂ ಮಹಿಳಾ ವೈದ್ಯರನ್ನು ಹಾಗೂ ಯೂರಾಲಾಜಿಸ್ಟ್ ಗಳನ್ನು ಸಂಪರ್ಕಿಸಿ ಸಲಹೆ ಪಡೆದುಕೊಳ್ಳಿ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ