ಭಾವನಾತ್ಮಕ ಲೈಂಗಿಕತೆ ನಿಮಗೆ ಬೇಕಾ?

ಸೋಮವಾರ, 6 ಜನವರಿ 2020 (15:00 IST)
ಅಂಗಾಂಗಗಳ ಸ್ಪರ್ಶಕ್ರಿಯೆ ಲೈಂಗಿಕ ಚಟುವಟಿಕೆಯ ಒಂದು ಅವಿಭಾಜ್ಯ ಅಂಗವೆ. ಆದರೆ, ಅದಕ್ಕೂ ವಿಭಿನ್ನವಾದ ಮತ್ತು ಅಷ್ಟೇ ಆನಂದದಾಯಕವಾಗಿರುವ ಸುಖ ಕೂಡ ಸ್ಪರ್ಶಿಸದೆ ಸಿಗುತ್ತದೆ. ಇದಕ್ಕೆಲ್ಲ ಕಾರಣ ಮಿದುಳು ನಮಗೆ ನೀಡುವ ಸಂಜ್ಞೆಗಳು.

ಸಂಜೆ ತಂಪಾದ ಗಾಳಿ ಬೀಸುತ್ತಿದ್ದಾಗ, ಕಿವಿಗಳಿಗೆ ಕಚಗುಳಿಯಿಡುತ್ತ ಏನೋ ಕಥೆ ಹೇಳುತ್ತಿದ್ದಾಗ, ಪಾಂಡ್ಸ್ ಪೌಡರ್ ಹಚ್ಚಿಕೊಂಡ ಹೆಂಡತಿ ಮುದ್ದಾದ ಗಲ್ಲ ಮುತ್ತಿಗೆ ಆಹ್ವಾನ ನೀಡುವ ವೇಳೆಯಾದಾಗ, ಮೈಮನದಲ್ಲಿ ಇದ್ದಕ್ಕಿದ್ದಂತೆ ರಕ್ತಸಂಚಾರ ಹೆಚ್ಚಾಗುವ ಸಮಯದಲ್ಲಿ ಹಾಸಿಗೆಯ ಮೇಲೆ ನಿಮ್ಮಿಬ್ಬರ ದೇಹಗಳು ಮಾತುಕತೆಗೆ ಕುಳಿತುಕೊಳ್ಳಲಿ.

ಗಂಡು ಹೆಣ್ಣಿನ ನಡುವಿನ ಬಂಧ ಬಿಗಿಯಾಗುತ್ತಿದ್ದಂತೆ ನಮ್ಮ ಮಿದುಳಿನ ಕ್ರಿಯೆ ಕೂಡ ತಕ್ಕಂತೆ ಬದಲಾಗುತ್ತ ಸಾಗುತ್ತದೆ. ನಮ್ಮ ನಡೆಗಳಿಗೆ, ವಿಚಾರಗಳಿಗೆ ಪೂರಕವಾಗಿ ನಮ್ಮ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಬಂಧ ಇನ್ನಷ್ಟು ಬಲವಾಗುವಂತೆ ಮಿದುಳು ನಮ್ಮನ್ನು ತಯಾರು ಮಾಡುತ್ತದೆ. ಖುಷಿಯ ಉತ್ತುಂಗದಲ್ಲಿದ್ದಾಗ ವಿಶಿಷ್ಟವಾದ ರಾಸಾಯನಿಕಗಳನ್ನು ಕೂಡ ಮಿದುಳು ಸ್ರವಿಸುವಂತೆ ಮಾಡುತ್ತದೆ.

ಒಬ್ಬಂಟಿಯಾಗಿ ಕೂಡ ಲೈಂಗಿಕ ಸುಖವನ್ನು ಪಡೆಯುವ ಹಲವಾರು ದಾರಿಗಳಿವೆ. ಆದರೆ, ಸಂಗಾತಿ ಜೊತೆಯಿದ್ದಾಗ, ಎರಡೂ ದೇಹಗಳು ಮನಸ್ಸುಗಳು ಬೆಸೆಯುವಾಗ ಸಂಭವಿಸುವ ಸ್ಖಲನ ಪ್ರಕ್ರಿಯೆಯಿದೆಯಲ್ಲ ಅದರ ಖುಷಿಯೇ ಬೇರೆ. ಎಲ್ಲಕ್ಕಿಂತ ಹೆಚ್ಚಾಗಿ ಈ ಲೈಂಗಿಕ ಕ್ರಿಯೆಯಿಂದಾಗಿ ಎರಡೂ ಮನಸ್ಸುಗಳು ಇನ್ನಷ್ಟು ಹತ್ತಿರವಾಗಬೇಕು ಮತ್ತು ದೇಹಗಳು ಕೂಡ ಸಂಭ್ರಮಿಸಬೇಕು. ಇಲ್ಲದಿದ್ದರೆ ಬರೀ ದೈಹಿಕ ಸುಖದಿಂದ ಮನಸ್ಸುಗಳು ಒಂದಾಗಲು ಸಾಧ್ಯವೇ ಇಲ್ಲ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ