ಸಾಮಾನ್ಯವಾಗಿ ದಂಪತಿಗಳು ಎದುರಿಸುವ ಲೈಂಗಿಕ ಸಮಸ್ಯೆಗಳು ಇವು!

ಸೋಮವಾರ, 2 ಜುಲೈ 2018 (09:18 IST)
ಬೆಂಗಳೂರು: ಸಾಮಾನ್ಯವಾಗಿ ದಂಪತಿಗಳಿಗೆ ಲೈಂಗಿಕ ವಿಚಾರದಲ್ಲಿ ಇಂತಹ ಸಮಸ್ಯೆಗಳು ಎದುರಾಗಬಹುದು. ಅವು ಯಾವುವು ನೋಡೋಣ.

ಒಬ್ಬರಿಗೆ ಆಸಕ್ತಿ, ಇನ್ನೊಬ್ಬರಿಗೆ ನಿರಾಸಕ್ತಿ
ಕೆಲವೊಂದು ಕಾರಣಗಳಿಂದ ದಂಪತಿಗಳಲ್ಲಿ ಒಬ್ಬರಿಗೆ ಆಸಕ್ತಿಯಿದ್ದರೆ, ಇನ್ನೊಬ್ಬರಿಗೆ ನಿರಾಸಕ್ತಿ ಮೂಡಬಹುದು. ಅಂತಹ ಸಂದರ್ಭದಲ್ಲಿ ಉತ್ತಮ ಸಂಬಂಧ ಹಾಳಾಗಬಹುದು.

ಸಂಕೋಚ
ಕೆಲವೊಮ್ಮೆ ಅದರಲ್ಲೂ ಹೆಚ್ಚಾಗಿ ಮಹಿಳೆಯರಿಗೆ ತನಗೆ ಲೈಂಗಿಕ ಸುಖ ಬೇಕೆನಿಸಿದಾಗ ಸಂಗಾತಿ ಬಳಿ ಹೇಳಿಕೊಳ್ಳಲು ಸಂಕೋಚವಾಗಬಹುದು.  ಇದು ಸಂವಹನ ಕೊರತೆ, ಹೊಂದಾಣಿಕೆ ಕೊರತೆಯಿಂದ ಆಗಬಹುದು.

ಸ್ವಾಭಿಮಾನ
ನಾನೇ ಯಾಕೆ ಪ್ರತೀ ಬಾರಿ ಬಳಿ ಹೋಗಬೇಕು ಎಂಬ ಈಗೋ ಸಂಗಾತಿಗೆ ಇದ್ದಲ್ಲಿ ಸಮಸ್ಯೆ ಸಾಮಾನ್ಯ. ಹಾಗೆಯೇ ನಿಮ್ಮನ್ನು ನೀವು ಹೊಸತನಕ್ಕೆ ಒಡ್ಡಿಕೊಳ್ಳಲು ಬಯಸದ ಗುಣ ಲೈಂಗಿಕ ಸಮಸ್ಯೆಗೆ ಕಾರಣವಾಗಬಹುದು.

ತಪ್ಪು ಕಲ್ಪನೆಗಳು
ಲೈಂಗಿಕತೆ ಬಗೆಗಿನ ಹಲವಾರು ತಪ್ಪುಗಳಿಂದ ಲೈಂಗಿಕ ಜೀವನದಲ್ಲಿ ನಿರಾಶೆಯಾಗಬಹುದು. ಋತುಮತಿಯಾದಾಗ ಲೈಂಗಿಕ ಸಂಬಂಧ, ಗರ್ಭನಿರೋಧಕ, ಲೈಂಗಿಕ ಕ್ರಿಯೆ ಸಂದರ್ಭದಲ್ಲಿ ಹೇಗಿರಬೇಕು ಎಂಬುದರ ಬಗ್ಗೆ ಸರಿಯಾದ ತಿಳುವಳಿಕೆ ಇಲ್ಲದೇ ಇದ್ದಲ್ಲಿ ಲೈಂಗಿಕ ಜೀವನಕ್ಕೆ ಕತ್ತರಿ ಗ್ಯಾರಂಟಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ