ಕಂದು ಅಕ್ಕಿ ಹಾಗೂ ಬಿಳಿ ಅಕ್ಕಿಯಲ್ಲಿ ಯಾವುದು ಬೆಸ್ಟ್ ಗೊತ್ತಾ? ನೀವೇ ತಿಳಿದುಕೊಳ್ಳಿ

ಭಾನುವಾರ, 1 ಜುಲೈ 2018 (11:08 IST)
ಬೆಂಗಳೂರು : ರೈಸ್ ಅಸೋಸಿಯೇಷನ್ ತಿಳಿಸುವಂತೆ, ಅಕ್ಕಿಯಲ್ಲಿ ಹಲವಾರು ವಿಧಗಳಿವೆ. ಅದರಲ್ಲಿ ಹೆಚ್ಚಿನವರು ಬೇಗ ಅಡುಗೆಯಾಗುತ್ತದೆ ಎಂದು ಬಿಳಿ ಅಕ್ಕಿಯನ್ನು ಹೆಚ್ಚಾಗಿ ಉಪಯೋಗಿಸುತ್ತಾರೆ. ಆದರೆ ಕಂದು ಅಕ್ಕಿ ಬೇಯಲು ತುಂಬಾ ಹೊತ್ತು ತೆಗೆದುಕೊಂಡರು ಅದರ ಲಾಭಾಂಶದ ಬಗ್ಗೆ ತಿಳಿದರೆ  ಇನ್ನು ಮುಂದೆ ಕಂದು ಅಕ್ಕಿಯನ್ನೇ ಬಳಸುತ್ತೀರಾ.


ಹೌದು. ಕಂದು ಅಕ್ಕಿಯಲ್ಲಿ 8 ಶೇಕಡಾದಷ್ಟು ಫೈಬರ್ ಅಂಶವಿದೆ. ಅದೇ ಬಿಳಿ ಅಕ್ಕಿಯಲ್ಲಿ 0.3 ಶೇಕಡಾದಷ್ಟು ಫೈಬರ್ ಅಂಶವಿರುತ್ತೆ. ಒಂದು ಕಪ್ ಬೇಯಿಸಿದ ಅಕ್ಕಿ ಅಥವಾ ಅನ್ನದಲ್ಲಿ 3.5 ಗ್ರಾಂನಷ್ಟು ಫೈಬರ್ ಇರುತ್ತದೆ. ನಿರೋಧಕ ಪಿಷ್ಟದಂಶವು ಎರಡೂ ಅಕ್ಕಿಗಳಲ್ಲೂ ಗಮನಿಸಿದ್ದು, ಇದು ಕರುಳಿನ ಲಾಭದಾಯಕವಾಗಿರುವ ಅಥವಾ ಆರೋಗ್ಯಕಾರಿಯಾಗಿರುವ ಬ್ಯಾಕ್ಟೀರಿಯಾಗಳಿಗೆ ಆಹಾರ ಒದಗಿಸುತ್ತದೆ ಮತ್ತು ಅವುಗಳ ಬೆಳವಣಿಗೆಗೆ ನೆರವಾಗುತ್ತದೆ. ಹಲವಾರು ವಿಟಮಿನ್ ಗಳು ಮತ್ತು ಮಿನರಲ್ ಗಳು ಕಂದು ಅಕ್ಕಿಯಲ್ಲಿ ಲಭ್ಯವಿರುತ್ತದೆ. ಆದರೆ ಬಿಳಿ ಅಕ್ಕಿಯಲ್ಲಿ ಇರುವುದಿಲ್ಲ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ