ʼಬೊಜ್ಜುʼ ನಿವಾರಿಸಲು ಕರಿಬೇವಿನ ಎಲೆ...!

ಮಂಗಳವಾರ, 12 ಅಕ್ಟೋಬರ್ 2021 (10:52 IST)
ಒಗ್ಗರಣೆ ರೂಪದಲ್ಲಿ ಬಳಸುವ ಈ ಕರಿಬೇವು ಅಡುಗೆಗೆ ಘಮ ಕೊಡುವುದರ ಜೊತೆ ಆರೋಗ್ಯಕ್ಕೂ ಲಾಭ ನೀಡುತ್ತದೆ.

ಬೊಜ್ಜು ನಿವಾರಿಸಲು ಬಯಸುವವರು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಗೆ 5 ರಿಂದ 6 ಕರಿಬೇವಿನ ತಾಜಾ ಎಲೆಗಳನ್ನು ತಿಂದರೆ ಅನಗತ್ಯ ಬೊಜ್ಜು ನಿವಾರಣೆಯಾಗುತ್ತದೆ.
ಮಧುಮೇಹ ಇರುವವರು ಈ ಕರಿಬೇವಿನ ಎಲೆಗಳನ್ನು ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಮಧುಮೇಹ ನಿಯಂತ್ರಣಗೊಳ್ಳುತ್ತದೆ.
ಕರಿಬೇವಿನ ಎಲೆಗಳಲ್ಲಿ ಕಬ್ಬಿಣ ಮತ್ತು ಫೋಲಿಕ್ ಆಸಿಡ್ ಅಂಶಗಳಿವೆ. ಇದು ಗರ್ಭಿಣಿಯರಿಗೆ ಹೆಣ್ಣುಮಕ್ಕಳಿಗೆ ಒಳ್ಳೆಯದು. ಒಂದೂವರೆ ಚಮಚದಷ್ಟು ಕರಿಬೇವಿನ ಎಲೆಯ ರಸ ಮತ್ತು ಒಂದು ಚಮಚ ನಿಂಬೆ ರಸ ಮತ್ತು ಸ್ವಲ್ಪ ಸಕ್ಕರೆಯನ್ನು ಸೇರಿಸಿ ಸೇವಿಸುವುದರಿಂದ ಅಜೀರ್ಣ ಸಮಸ್ಯೆ ನಿವಾರಣೆ ಆಗುತ್ತದೆ.
ಕರಿಬೇವು ಕಣ್ಣಿಗೂ ಉಪಯುಕ್ತವಾದುದು. ಅಲ್ಲದೇ ಕರಿಬೇವನ್ನು ಕೊಬ್ಬರಿ ಎಣ್ಣೆಯಲ್ಲಿ ಹಾಕಿ ಚೆನ್ನಾಗಿ ಕುದಿಸಿ, ಆ ಎಣ್ಣೆಯನ್ನು ಸೋಸಿ ಶೇಖರಿಸಿ ಇಟ್ಟು ಪ್ರತಿದಿನ ತಲೆ ಕೂದಲಿಗೆ ಹಚ್ಚುವುದರಿಂದ ತಲೆ ಕೂದಲು ಕಪ್ಪಾಗಿ ಮತ್ತು ಸುಂದರವಾಗಿ ಹೊಳೆಯಲು ಪ್ರಾರಂಭಿಸುತ್ತವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ