ಮಧುಮೇಹಿಗಳು ಮಾವಿನ ಹಣ್ಣು ಸೇವಿಸಬಾರದೇ?

ಸೋಮವಾರ, 5 ಜೂನ್ 2017 (10:14 IST)
ಬೆಂಗಳೂರು: ಮಾವಿನ ಹಣ್ಣನ್ನು ಇಷ್ಟಪಡದವರು ಯಾರು? ಎಲ್ಲರಿಗೂ ಪ್ರಿಯವಾದ ಹಣ್ಣಿದು. ಆದರೆ ಸಕ್ಕರೆ ಕಾಯಿಲೆ ಇರುವವರು ಅತಿಯಾದ ಸಿಹಿಯಿರುವ ಮಾವಿನ ಹಣ್ಣು ಸೇವಿಸಬಹುದೇ ಎನ್ನುವ ಗೊಂದಲವಿದೆ.

 
ಮಾವಿನ ಹಣ್ಣಿನಲ್ಲಿ ಅಧಿಕ ಕಾರ್ಬೋಹೈಡ್ರೇಟ್ ಅಂಶವಿದ್ದು, ಬೇಗನೇ ಜೀರ್ಣವಾಗುತ್ತದೆ. ಇದನ್ನು ಮಧುಮೇಹಿಗಳು ಸೇವಿಸುವುದರಿಂದ ಏನೂ ಸಮಸ್ಯೆಯಾಗದು ಎನ್ನುವುದು ವಿದೇಶೀ ತಜ್ಞರ ಅಭಿಪ್ರಾಯ. ಆದರೆ ಭಾರತದ ತಜ್ಞರು ಹೇಳುವುದೇ ಬೇರೆ.

ಮಾವಿನ ಹಣ್ಣಿನಲ್ಲಿ ಕಾರ್ಬೋಹೈಡ್ರೇಟ್ ಅಂಶ ಹೆಚ್ಚು. 5 ಗ್ರಾಂ ಕಾರ್ಬೋಹೈಡ್ರೇಟ್ ಅಂಶ ರಕ್ತದಲ್ಲಿ 100 ಯೂನಿಟ್ ಗಳಷ್ಟು ಸಕ್ಕರೆ ಅಂಶ ಹೆಚ್ಚಿಸುತ್ತದೆ. ಹಾಗಾಗಿ ಮಧುಮೇಹಿಗಳಿಗೆ ಮಾವಿನ ಹಣ್ಣು ಸೇವನೆ ಒಳ್ಳೆಯದಲ್ಲ. ಒಂದು ವೇಳೆ ಸೇವಿಸಲೇಬೇಕೆಂದಿದ್ದರೆ, ಆಹಾರದಲ್ಲಿ ಇತರ ಕಾರ್ಬೋಹೈಡ್ರೇಟ್ ಅಂಶವಿರುವ ಗೋಧಿ, ಅಕ್ಕಿ ಅಂಶವನ್ನು ಕಡಿಮೆ ಮಾಡಿ ಮಾವಿನ ಹಣ್ಣು ಸೇವಿಸಬಹುದು ಎಂದು ದೆಹಲಿಯ ವೈದ್ಯಕೀಯ ತಜ್ಞರು ಹೇಳುತ್ತಾರೆ.

ಹಾಗೆಯೇ ಉನ್ನತ ಮಟ್ಟದ ಮಧುಮೇಹ ಇರುವವರು ಮಾವಿನ ಹಣ್ಣು ಸೇವನೆ ಮಾಡುವುದು ಒಳ್ಳೆಯದಲ್ಲ. ಆದರೆ ಹದವಾಗಿ ಮಧುಮೇಹ ಮಟ್ಟ ಹೊಂದಿರುವವರಿಗೆ ಮಾವಿನ ಹಣ್ಣು ತಿನ್ನುವ ಆಸೆಗೆ ಕಡಿವಾಣ ಹಾಕಬೇಕಿಲ್ಲ ಎಂದು ಬೆಂಗಳೂರಿನ ತಜ್ಞರು ಹೇಳುತ್ತಾರೆ. ಏನೇ ಆದರೂ ನಿಮ್ಮ ದೇಹಕ್ಕೆ ಅನುಗುಣವಾಗಿ ಆಹಾರವಿರಲಿ ಎನ್ನುವುದು ತಜ್ಞರ ಅಭಿಪ್ರಾಯ.

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ