ಅತಿಯಾಗಿ ಬಿಸಿಲಿಗೆ ಮೈ ಒಡ್ಡುವುದರಿಂದ ಸ್ಕಿನ್ ಟ್ಯಾನ್ ಆಗುವ ಅಪಾಯ ಹೆಚ್ಚುತ್ತದೆ. ಬಿಸಿಲಿಗೆ ಮೈ ಒಡ್ಡುವ ಭಾಗ ಹೆಚ್ಚು ಕಪ್ಪಾಗಿದ್ದರೆ ನೋಡಲು ಅಸಹ್ಯವಾಗಿರುತ್ತದೆ. ಇದನ್ನು ಸರಿಪಡಿಸಲು ಪ್ರತಿನಿತ್ಯ ಸೂರ್ಯನ ಬಿರು ಬಿಸಿಲಿಗೆ ಹೋಗುವಾಗ ಸನ್ ಲೋಷನ್ ಹಾಕಿಕೊಂಡು ಹೋಗುವುದು ಉತ್ತಮ. ಅದರ ಜೊತೆಗೆ ಚರ್ಮದ ಕಪ್ಪು ಕಲೆ ಮಾಯವಾಗಿ ಕಾಂತಿಯುತವಾಗಬೇಕಾದರೆ ಈ ಒಂದು ಮನೆ ಮದ್ದು ಮಾಡಿ ನೋಡಬಹುದು.
ಬೇಕಾಗುವ ಸಾಮಗ್ರಿಗಳು
ಪಪ್ಪಾಯ ಹಣ್ಣಿನ ಹೋಳುಗಳು
1 ಟೇಬಲ್ ಸ್ಪೂನ್ ಜೇನು ತುಪ್ಪ
ಮಾಡುವುದು ಹೇಗೆ?
ನಾಲ್ಕೈದು ಪಪ್ಪಾಯ ಹಣ್ಣಿನ ಹೋಳುಗಳನ್ನು ಒಂದು ಸ್ಪೂನ್ ಜೇನು ತುಪ್ಪ ಬೆರೆಸಿ ಚೆನ್ನಾಗಿ ಕಿವುಚಿಕೊಳ್ಳಿ. ಇದನ್ನು ಸ್ಮೂತ್ ಪೇಸ್ಟ್ ಮಾಡಿಕೊಂಡು ಕಪ್ಪಾಗಿರುವ ಜಾಗಕ್ಕೆ ಹಚ್ಚಿಕೊಳ್ಳಿ. ಇದನ್ನು ಸುಮಾರು 10 ರಿಂದ 15 ನಿಮಿಷಗಳ ಕಾಲ ಹಾಗೆಯೇ ಇಟ್ಟುಕೊಳ್ಳಿ. ಬಳಿಕ ಹದ ಬಿಸಿ ನೀರಿನಿಂದ ತೊಳೆದುಕೊಳ್ಳಿ. ಇದೇ ರೀತಿ ನಿಯಮಿತವಾಗಿ ಮಾಡುತ್ತಿದ್ದರೆ ಚರ್ಮದ ಕಪ್ಪಾದ ಭಾಗ ಮಾಯವಾಗಿ ಹೊಳಪು ಮೂಡುತ್ತದೆ.