ಬೆಂಗಳೂರು: ಪಿಜ್ಜಾ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ? ಖುಷಿಯಾಯ್ತು, ಪಾರ್ಟಿ ಇದೆ, ನಾಲ್ಕು ಜನ ಫ್ರೆಂಡ್ಸ್ ಸೇರಿದೆವೆಂದರೆ ಪಿಜ್ಜಾ ತಿನ್ನುವುದು, ಸೋಡಾ ಏರಿಸುವುದು ಎಲ್ಲಾ ಮಾಮೂಲು. ಆದರೆ ಇದನ್ನೆಲ್ಲಾ ನಿಮ್ಮ ಮಕ್ಕಳಿಗೆ ಕೊಡುವ ಮೊದಲು ಇದನ್ನು ಗಮನಿಸಿ.
ಪಿಜ್ಜಾ, ಸೋಡಾ, ಸಿಹಿ ತಿನಿಸುಗಳು, ಮಜ್ಜಿಗೆಯಂತಹ ಆಹಾರ ವಸ್ತುಗಳನ್ನು ಪ್ರತಿ ನಿತ್ಯ ಮಕ್ಕಳು ಸೇವಿಸುವುದು ಅವರ ಆರೋಗ್ಯಕ್ಕೆ ಹಾನಿಕರ ಎಂದು ಹೊಸ ಸಂಶೋಧನೆಯಿಂದ ತಿಳಿದುಬಂದಿದೆ. ಸುದೀರ್ಘ ಸಮಯ ಇಂತಹ ಆಹಾರ ಸೇವಿಸುವುದರಿಂದ ಮಕ್ಕಳ ಪಿತ್ತ ಜನಕಾಂಗ ಹಾನಿಯಾಗುತ್ತದೆ ಎಂದು ತಿಳಿದು ಬಂದಿದೆ.
ಇಟೆಲಿಯ ಬ್ಯಾಂಬಿನೊ ಆಸ್ಪತ್ರೆಯ ವೈದ್ಯರು ಈ ಸತ್ಯ ಕಂಡುಕೊಂಡಿದ್ದಾರೆ. ಇಂತಹ ಆಹಾರ ಸೇವನೆಗಳು ನೇರವಾಗಿ ಪಿತ್ತಜನಕಾಂಗ ಸಂಬಂಧಿ ರೋಗಗಳಿಗೆ ಕಾರಣವಾಗುತ್ತವೆ. ಹಾಗಾಗಿ ಮಕ್ಕಳಿಗೆ ಆರೋಗ್ಯಕರ ಆಹಾರ ನೀಡಿ ಎನ್ನುವುದು ವೈದ್ಯರ ಸಲಹೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ