ಗರ್ಭಿಣಿ ಮಹಿಳೆಯರು ಈ ಆಹಾರಗಳನ್ನು ಸೇವಿಸಲೇಬಾರದು!

ಗುರುವಾರ, 16 ಫೆಬ್ರವರಿ 2017 (10:21 IST)
ಬೆಂಗಳೂರು: ಗರ್ಭಿಣಿ ಮಹಿಳೆಯರನ್ನು ಎಷ್ಟು ಜೋಪಾನವಾಗಿ ನೋಡಿಕೊಂಡರೂ ಸಾಲದು. ಆಹಾರದ ವಿಚಾರದಲ್ಲಂತೂ ಎಚ್ಚರಿಕೆಯಿಂದಿರಬೇಕು. ಹೀಗಾಗಿ ಗರ್ಭಿಣಿ ಮಹಿಳೆಯರು ಯಾವೆಲ್ಲಾ ಆಹಾರ ತಿನ್ನಬಾರದು ನೋಡೋಣ.

 
ಹಸಿ ಮೊಟ್ಟೆ

ಮೊಟ್ಟೆ ಆರೋಗ್ಯಕ್ಕೆ ಒಳ್ಳೆಯದೇನೋ ನಿಜ. ಆದರೆ ಹಾಗಂತ ಹಸಿ ಮೊಟ್ಟೆ ಅಥವಾ ಹಸಿ ಮೊಟ್ಟೆ ಹಾಕಿ ಮಾಡಿದ ಪದಾರ್ಥಗಳನ್ನು ಗರ್ಭಿಣಿ ಮಹಿಳೆಯರಿಗೆ ನೀಡಬೇಡಿ.

ನುಗ್ಗೆ ಸೊಪ್ಪು

ಬಾಣಂತಿಯರಿಗೆ ನುಗ್ಗೆ ಸೊಪ್ಪು ಉತ್ತಮ. ಆದರೆ ಗರ್ಭಿಣಿ ಮಹಿಳೆಯರಿಗೆ ನುಗ್ಗೆ ಸೊಪ್ಪಿನ ಸೇವನೆ ಒಳ್ಳೆಯದಲ್ಲ. ಇದು ಉಷ್ಣ ಗುಣದ ಆಹಾರ ವಸ್ತುವಾದ್ದರಿಂದ ಗರ್ಭಪಾತವಾಗುವ ಅಪಾಯವಿದೆ.

ಅಲ್ಯುವೀರಾ

ಗರ್ಭಿಣಿ ಮಹಿಳೆಯರು ಅಲ್ಯುವೀರಾವನ್ನು ನೇರವಾಗಿ ಅಥವಾ ಪರೋಕ್ಷವಾಗಿ ಸೇವಿಸುವುದು ಖಂಡಿತಾ ಒಳ್ಳೆಯದಲ್ಲ. ಇದು ಗರ್ಭಪಾತಕ್ಕೆ ಕಾರಣವಾಗಬಹುದು.

ಪಪ್ಪಾಯ ಮತ್ತು ಅನಾನಾಸು

ಹಣ್ಣು ಹೇರಳವಾಗಿ ತಿಂದರೆ ಹುಟ್ಟುವ ಮಗು ಚೆನ್ನಾಗಿರುತ್ತದೆ ಎನ್ನುವುದೇನೋ ನಿಜ. ಆದರೆ ಉಷ್ಣ ಪ್ರಕೃತಿಯ ಪಪ್ಪಾಯ ಮತ್ತು ಅನಾನಾಸು ಹಣ್ಣು ಖಂಡಿತಾ ತಿನ್ನಬೇಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ