ಮಕ್ಕಳಲ್ಲಿ ಆಂಟಿ ಬಯೋಟಿಕ್ ಅರ್ಧಕ್ಕೇ ನಿಲ್ಲಿಸುವುದು ಅಪಾಯ

ಬುಧವಾರ, 28 ಡಿಸೆಂಬರ್ 2016 (07:09 IST)
ಬೆಂಗಳೂರು: ಈಗೀಗ ಜ್ವರ ಬಂದರೆ, ಕೆಮ್ಮು ಬಂದರೆ, ಏನೇ ಆದರೂ, ಮಕ್ಕಳಿಗೆ ಕೇವಲ ಸಿರಪ್ ಕುಡಿಸಿದರೆ ಸಾಕಾಗೋದಿಲ್ಲ. ಆಂಟಿ ಬಯೋಟಿಕ್ ತೆಗೆದುಕೊಳ್ಳದೆ ಯಾವ ರೋಗವೂ ಗುಣವಾಗುವುದಿಲ್ಲ. ಆದರೆ ಗುಣವಾದ ತಕ್ಷಣ ಆಂಟಿ ಬಯೋಟಿಕ್ ಕೋರ್ಸ್ ನಿಲ್ಲಿಸುವುದು ಒಳ್ಳೆಯದಲ್ಲ.


ಒಂದು ವೇಳೆ ಗುಣವಾಯಿತೆಂದು ಆಂಟಿಬಯೋಟಿಕ್ ಕೋರ್ಸ್ ಅರ್ಧಕ್ಕೆ ನಿಲ್ಲಿಸಿದರೆ, ಮಕ್ಕಳಲ್ಲಿ ಕಿವಿಗೆ ಸಂಬಂಧಿಸಿದ ಸಮಸ್ಯೆ ಎದುರಾಗುವ ಅಪಾಯವಿದೆಯಂತೆ. ಹಾಗಂತ ಪಿಟ್ಸ್ ಬರ್ಗ್ ಯೂನಿವರ್ಸಿಟಿಯ ಸಂಶೋಧಕರು ಕಂಡುಕೊಂಡಿದ್ದಾರೆ.

ಮಕ್ಕಳಲ್ಲಿ ಆಂಟಿ ಬಯೋಟಿಕ್ ಅರ್ಧಕ್ಕೆ ನಿಲ್ಲಿಸಿದರೆ ಕಿವಿ ಸಮಸ್ಯೆ ಮಾತ್ರವಲ್ಲ, ರೋಗ ನಿರೋಧಕ ಶಕ್ತಿಯೂ ಕುಂಟಿತವಾಗುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ. ಅಮೆರಿಕಾದ ಸುಮಾರು 500 ಕ್ಕೂ ಅಧಿಕ ಮಕ್ಕಳ ಮೇಲೆ ಪ್ರಯೋಗ ನಡೆಸಿ ಸಂಶೋಧಕರು ಈ ಸತ್ಯ ಕಂಡುಕೊಂಡಿದ್ದಾರಂತೆ. ಹೀಗಾಗಿ ಇನ್ನು ಮುಂದೆ ಆಂಟಿ ಬಯೋಟಿಕೆ ಸಿರಪ್ ಕುಡಿಯಲು ಹಿಂದೇಟು ಹಾಕುವ ಮಕ್ಕಳಿಗೆ ಈ ವಿಷಯವನ್ನು ತಪ್ಪದೇ ತಿಳಿಸಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ