ನಿಮ್ಮ ಸೌಂದರ್ಯವನ್ನು ಕಾಪಾಡಲು ರಾತ್ರಿ ಮಲಗುವ ಮುಂಚೆ ತಪ್ಪದೇ ಈ ಕೆಲಸ ಮಾಡಿ
ಮಂಗಳವಾರ, 24 ಸೆಪ್ಟಂಬರ್ 2019 (08:24 IST)
ಬೆಂಗಳೂರು : ಹೆಣ್ಣು ಮಕ್ಕಳು ಸೌಂದರ್ಯಕ್ಕೆ ಹೆಚ್ಚು ಮಹತ್ವ ನೀಡುತ್ತಾರೆ. ತಾವು ಸುಂದರವಾಗಿ ಕಾಣಬೇಕೆಂದು ಹರಸಾಹಸ ಪಡುತ್ತಾರೆ. ಅಂತವರು ತಮ್ಮ ಸೌಂದರ್ಯವನ್ನು ಕಾಪಾಡಲು ರಾತ್ರಿ ಮಲಗುವ ಮುಂಚೆ ತಪ್ಪದೇ ಈ ಕೆಲಸ ಮಾಡಿ.
*ರಾತ್ರಿ ಮಲಗುವ ಮೊದಲು ಎಲ್ಲಾ ರೀತಿಯ ಮೇಕಪ್ ನ್ನು ತೆಗೆಯಬೇಕು. ಮೇಕಪ್ ನ್ನು ಹಾಗೆ ಬಿಟ್ಟರೆ ಅದರಿಂದ ಚರ್ಮಕ್ಕೆ ಹಾನಿಯಾಗಬಹುದು ಮತ್ತು ಇದರಿಂದ ಚರ್ಮಕ್ಕೆ ಉಸಿರಾಡಲು ಸಾಧ್ಯವಾಗುವುದಲ್ಲ. ಚರ್ಮದಲ್ಲಿರುವ ರಂಧ್ರ ತುಂಬಿಕೊಂಡಿರುವ ಕಾರಣ ಮೊಡವೆ ಹಾಗೂ ಬೊಕ್ಕೆಗಳು ಮೂಡಬಹುದು.
* ರಾತ್ರಿ ಮಲಗುವ ಮೊದಲು ಕಣ್ಣಿನ ರೆಪ್ಪೆಗಳಿಗೆ ಹರಳೆಣ್ಣೆ ಹಚ್ಚಿಕೊಂಡರೆ ಅದರಿಂದ ಕಣ್ಣಿನ ರೆಪ್ಪೆಗಳು ದಪ್ಪವಾಗುವುದು.
* ರಾತ್ರಿ ಮಲಗುವ ಮೊದಲು ತಲೆಗೆ ತೆಂಗಿನೆಣ್ಣೆ ಹಚ್ಚಿಕೊಂಡು ರಾತ್ರಿಯಿಡಿ ಹಾಗೆ ಬಿಡಿ. ಮಲಗುವ ಮೊದಲು ಒಣ ಕೂದಲಿಗೆ ಕಂಡೀಷನರ್ ಹಚ್ಚಿಕೊಳ್ಳಬಹುದು. ಬೆಳಿಗ್ಗೆ ಎದ್ದು ಶಾಂಪೂವಿನಿಂದ ಕೂದಲು ತೊಳೆಯಿರಿ. ಇದರಿಂದ ಕೂದಲು ಕಾಂತಿಯುತ ಹಾಗೂ ಮೃದುವಾಗುವುದು.
* ಮಲಗುವ ಮೊದಲು ತುಟಿಗಳಿಗೆ ಬೆಣ್ಣೆ ಹಚ್ಚಿಕೊಳ್ಳಿ. ಇದರಿಂದ ತುಟಿಗಳು ತುಂಬಾ ಮೃದುವಾಗುವುದು ಮತ್ತು ದೀರ್ಘಕಾಲದ ತನಕ ತುಟಿಗಳಲ್ಲಿ ತೇವಾಂಶವಿರುವುದು.
* ನಗುವಾಗ ಬಿಳಿಯಾದ ಸುಂದರ ಹಲ್ಲುಗಳು ಕಾಣಬೇಕೆಂದರೆ ಒಂದು ಚಿಟಿಕೆ ಅಡುಗೆ ಸೋಡಾದಿಂದ ಹಲ್ಲುಗಳಿಗೆ ಕೆಲವು ನಿಮಿಷ ಕಾಲ ಮಸಾಜ್ ಮಾಡಿಕೊಳ್ಳಿ. ಮಲಗುವ ಮೊದಲು ಪ್ರತೀದಿನ ಹೀಗೆ ಮಾಡಿದರೆ ಹಲ್ಲುಗಳು ಫಳಫಳ ಹೊಳೆಯುವುದು.