ಪ್ರತಿನಿತ್ಯದ ಕೆಲಸದಿಂದ ನಿಮ್ಮ ಕೈಗಳ ಚರ್ಮ ಹಾಳಾಗದೆ ಮೃದುವಾಗಿರಲು ಹೀಗೆ ಮಾಡಿ
ಶನಿವಾರ, 14 ಸೆಪ್ಟಂಬರ್ 2019 (07:55 IST)
ಬೆಂಗಳೂರು : ಪ್ರತಿನಿತ್ಯ ಮಾಡುವ ಕೆಲಸದಿಂದ ಕೈಗಳ ಸ್ಕೀನ್ ಹಾಳಾಗುತ್ತದೆ. ಇದರಿಂದ ಕೈಗಳು ಮೃದುತ್ವವನ್ನು ಕಳೆದುಕೊಳ್ಳುತ್ತದೆ. ಅದಕ್ಕೆ ಪರಿಹಾರ ಇಲ್ಲಿದೆ ನೋಡಿ.
*ಕೆಲವರ ಅಂಗೈಯಲ್ಲಿ ಹೊಟ್ಟು ತೆರನಾಗಿ ಪುಡಿ ಉದುರುವುದು ಆಗ ಪಾಮ್ ಎಣ್ಣೆಗೆ ಬಾದಾಮಿ ಎಣ್ಣೆ ಸೇರಿಸಿ ಕೈಗಳಿಗೆ ಮಸಾಜ್ ಮಾಡುವುದರಿಂದ ಹೊಟ್ಟು ನಿವಾರಣೆ ಆಗುವುದು.
*ರಾತ್ರಿ ಮಲಗುವ ಮುನ್ನ ಹಾಲಿನ ಕೆನೆಗೆ ಚಿಟಕಿ ಅರಿಶಿಣ, ನಿಂಬೆರಸ, ಗ್ಲಿಸರೀನ್ ಸೇರಿಸಿ ಅಂಗೈಗೆ ಹಚ್ಚಿಕೊಳ್ಳಿ. ಕೈಗಳಲ್ಲಿನ ಬಿರುಕು, ಒರಟುತನ ಮಾಯವಾಗುವುದು.
*ಡಿಟೆರ್ಜೆಂಟ್ ಉಪಯೋಗಿಸಿ ಕೆಲಸ ಮಾಡುತ್ತಿದ್ದರೆ ಕೈಗಳಿಗೆ ಹಾನಿ ಆಗುವುದು ಖಂಡಿತ. ದಿನಕ್ಕೊಮ್ಮೆಯಾದರೂ ಬೇಯಿಸಿದ ಆಲೂಗಡ್ಡೆ ನೀರಲ್ಲಿ ಕೈಯನ್ನು ಹತ್ತು ನಿಮಿಷ ಮುಳುಗಿಸಿ ಆಲೂಸಿಪ್ಪೆಯಲ್ಲಿ ಕೈಗಳನ್ನು ಉಜ್ಜಿ. ಚರ್ಮ ಒರಟಾಗದೆ ಇರುವುದು.
*ಬಟ್ಟೆ ಒಗೆದಾಗ, ಪಾತ್ರೆ ತೊಳೆದಾಗ ಕೈಗಳು ಒರಟಾದಂತೆ ಕಂಡುಬರುತ್ತವೆ. ನಿಂಬೆರಸ ಸೇರಿಸಿದ ಉಗುರು ಬೆಚ್ಚಗಿನ ನೀರಲ್ಲಿ ಕೈತೊಳೆದು ಒಣ ಬಟ್ಟೆಯಲ್ಲಿ ಒರೆಸಿ ಆಲೀವ್ ಆಯಿಲ್ ಹಾಕಿಕೊಳ್ಳಿ ಕ್ಷ ಣಾರ್ಧದಲ್ಲೆ ನಿಮ್ಮ ಅಂಗೈ ಮೆತ್ತಗಾಗುವುದು.