ಸಂಭೋಗ ಶಕ್ತಿ ಹೆಚ್ಚಾಗಲು ಹೀಗೆ ಮಾಡಿ

ಗುರುವಾರ, 19 ಸೆಪ್ಟಂಬರ್ 2019 (18:07 IST)
ಮಹಿಳೆ ಹಾಗೂ ಪುರುಷರ ಲೈಂಗಿಕ ಶಕ್ತಿಯನ್ನು ಹೆಚ್ಚಿಸಲು ಕೆಲವು ಹಣ್ಣು ಹಾಗೂ ತರಕಾರಿಗಳು ಸಹಕಾರಿಯಾಗಿದೆಅದೇರೀತಿ ಕೆಲವು ತೈಲಗಳು ಕೂಡ ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತವೆ

 
ಗುಲಾಬಿ ತೈಲ ಇಂದ್ರೀಯಗಳಿಗೆ ಆರಾಮ ನೀಡುವುದಲ್ಲದೆ ಈ ತೈಲ ಹಾಕಿದ ನೀರಿನಲ್ಲಿ ಸ್ನಾನ ಮಾಡುವುದರಿಂದ ನಿಮ್ಮನ್ನ ರೋಮ್ಯಾಂಟಿಕ್ ಮೂಡ್ ಗೆ ಕರೆದೊಯ್ಯುತ್ತದೆ. ಹಾಗೇ ಲವಂಗದ ತೈಲ ಒತ್ತಡವನ್ನು ಕಡಿಮೆ ಮಾಡಿ, ಒಳ್ಳೆಯ ಮೂಡ್ ತರಿಸುತ್ತದೆ. ದಾಲ್ಚಿನಿ ತೊಗಟೆಗಳ ತೈಲ ಲೈಂಗಿಕ ಸಮಸ್ಯೆಯನ್ನು ನಿವಾರಿಸುತ್ತದೆ.

ಶ್ರೀಗಂಧ ತೈಲದ ಪರಿಮಳ ಲೈಂಗಿಕತೆ ಬಯಕೆ ಹೆಚ್ಚಿಸುವುದಲ್ಲದೇ ಪ್ರೀತಿ ಮಾಡುವ ಶಕ್ತಿಯನ್ನು ನೀಡುತ್ತದೆ. ಆದ್ದರಿಂದ ಇದನ್ನು ಪುರುಷರು ಹೆಚ್ಚಾಗಿ ಬಳಸುತ್ತಾರೆ. ಲ್ಯಾವೆಂಡರ್ ಹೂ ತೈಲವನ್ನು ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಹಾರ್ಮೋನುಗಳ ಸಮತೋಲನವನ್ನು ಕಾಪಾಡುವುದರಿಂದ  ಇದನ್ನು ಎದೆ, ಮಣಿಕಟ್ಟು ಮತ್ತು ಕಿವಿಯ ಹಿಂಭಾಗದಲ್ಲಿ ಹಚ್ಚಿಕೊಳ್ಳುವುದರಿಂದ ಉತ್ತಮ ಪರಿಣಾಮ ಬೀರುತ್ತದೆ.




ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ