ಬಾಳೆ ಹಣ್ಣು ತಿನ್ನುವುದರಿಂದ ದಪ್ಪಗಾಗುವುದು ನಿಜವೇ?

ಗುರುವಾರ, 3 ಆಗಸ್ಟ್ 2017 (09:02 IST)
ಬೆಂಗಳೂರು: ಪ್ರತಿ ನಿತ್ಯ ಬಾಳೆ ಹಣ್ಣು ತಿನ್ನುತ್ತಿದ್ದರೆ ದಪ್ಪಗಾಗುತ್ತೇವೆ ಎಂಬ ನಂಬಿಕೆ ಅನೇಕರಲ್ಲಿದೆ. ನಿಜವಾಗಿಯೂ ಬಾಳೆಹಣ್ಣು ತಿನ್ನುವುದರಿಂದ ನಾವು ದಪ್ಪಗಾಗುತ್ತೇವಾ? ಬೊಜ್ಜು ಬೆಳೆಯುವುದು ನಿಜವಾ?


ಹಾಗೇನೂ ಇಲ್ಲ ಅಂತಾರೆ ತಜ್ಞರು. ಬಾಳೆ ಹಣ್ಣಿನಲ್ಲಿ ಫೈಬರ್, ಹಾಗೂ ಇತರ ಅನೇಕ ಪೋಷಕಾಂಶಗಳು ಹೇರಳವಾಗಿದೆ. ಜೀರ್ಣಪ್ರಕ್ರಿಯೆ ಸುಗಮವಾಗಲು, ದೇಹಕ್ಕೆ ಬೇಕಾದ ಶಕ್ತಿ ಒದಗಿಸಲು ಇದಕ್ಕಿಂತ ಉತ್ತಮ ಹಣ್ಣು ಬೇರೊಂದಿಲ್ಲ.

ಆದರೆ ಅನೇಕರು ಇದನ್ನು ತಿಂದರೆ ದಪ್ಪಗಾಗುತ್ತೇವೆ ಎಂಬ ಕಲ್ಪನೆ ಇಟ್ಟುಕೊಂಡಿದ್ದಾರೆ. ಇದು ನಿಜವಾಗಿಯೂ ತಪ್ಪು. ಬಾಳೆ ಹಣ್ಣಿನಲ್ಲಿ ಕೊಬ್ಬಿನಂಶ ಸ್ವಲ್ಪವೂ ಇಲ್ಲ. ಇದರಲ್ಲಿ ದೇಹಕ್ಕೆ ಬೇಕಾದಷ್ಟು ಕ್ಯಾಲೊರಿಯಿದೆ. ಹಾಗೂ ಪೊಟೇಷಿಯಂ ಹೇರಳವಾಗಿದ್ದು, ಹೃದಯದ ಆರೋಗ್ಯಕ್ಕೂ ಒಳ್ಳೆಯದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ಇದನ್ನೂ ಓದಿ..  ಸೆಕ್ಸ್  ನಿಂದ ಹೃದಯಾಘಾತವಾಗುತ್ತಾ? ತಜ್ಞರು ಹೇಳಿದ್ದೇನು?

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ