Red Wine: ರೆಡ್ ವೈನ್ ಸೇವಿಸುವ ಮೊದಲು ನೀವು ವೈನ್ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳಬೇಕು. ಇದು ನಿಮ್ಮ ಆರೋಗ್ಯದ ಮೇಲೆ ಯಾವ ರೀತಿಯಲ್ಲಿ ಒಳ್ಳೆಯ ಮತ್ತು ಕೆಟ್ಟ ಪರಿಣಾಮವನ್ನು ಬೀರುತ್ತದೆ ಎಂಬುದನ್ನ ಅರಿತುಕೊಳ್ಳಬೇಕು. ವೈನ್ನಲ್ಲಿ ರೋಗನಿರೋಧಕ ಗುಣಲಕ್ಷಣಗಳು ಹೆಚ್ಚಿವೆ.
ರೆಡ್ ವೈನ್ ಹೆಚ್ಚು ಆರೋಗ್ಯಕ್ಕೆ ಪ್ರಯೋಜನ ಎಂಬುದು ಈಗಲೂ ಸಹ ಒಂದು ಚರ್ಚೆಯ ವಿಚಾರ. ಆದರೆ ಕೇವಲ 12% -15% ನಷ್ಟು ಆಲ್ಕೋಹಾಲ್ ಅಂಶವನ್ನು ಹೊಂದಿರುವ ಮಧ್ಯಮ ಪ್ರಮಾಣದ ರೆಡ್ ವೈನ್ ಸೇವನೆ ಹೃದಯ ಸಂಬಂಧಿಸಿದ ಸಮಸ್ಯೆ ಸೇರಿದಂತೆ ಹಲವಾರು ರೋಗಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ ಎಂದು ಸಂಶೋಧನೆಗಳು ಹೇಳಿವೆ. ಮಿತಿಯಲ್ಲಿ ಕುಡಿಯುವುದು ಮತ್ತು ಅತಿಯಾಗಿ ಸೇವಿಸುವುದರ ನಡುವೆ ಬಹಳ ವ್ಯತ್ಯಾಸವಿದೆ ಎಂಬುದನ್ನ ಅರಿತು ಕುಡಿಯಬೇಕು. ವೈನ್ ನ ಅತಿಯಾದ ಸೇವನೆಯು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಅತಿ ಹೆಚ್ಚು ಸೇವನೆ ಮಾಡುವುದರಿಂದ ರೆಡ್ ವೈನ್ನಿಂದ ಸಿಗುವ ಯಾವುದೇ ಆರೋಗ್ಯಕರ ಪ್ರಯೋಜನಗಳು ನಿಮಗೆ ಸಿಗುವುದಿಲ್ಲ ಎಂದು ತಜ್ಞರು ಹೇಳುತ್ತಾರೆ.
ರುಚಿ ಮತ್ತು ಬಣ್ಣದಲ್ಲಿ ಬದಲಾಗಬಹುದಾದ ರೆಡ್ ವೈನ್ಗಳನ್ನು ಸಂಪೂರ್ಣ, ಕಪ್ಪು ಬಣ್ಣದ ದ್ರಾಕ್ಷಿಯನ್ನು ಪುಡಿಮಾಡಿ ತಯಾರಿಸಲಾಗುತ್ತದೆ. ಮೆರ್ಲಾಟ್, ಪಿನೋಟ್ ನಾಯ್ರ್, ಕ್ಯಾಬರ್ನೆಟ್ ಸಾವಿಗ್ನಾನ್, ಶಿರಾಜ್ ಇತ್ಯಾದಿಗಳಲ್ಲಿ ಸಹ ಹಲವು ವಿಧದ ರೆಡ್ ವೈನ್ಗಳು ಲಭ್ಯವಿದೆ. ರೆಡ್ ವೈನ್ ಸೇವಿಸುವ ಮೊದಲು ನೀವು ವೈನ್ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳಬೇಕು. ಇದು ನಿಮ್ಮ ಆರೋಗ್ಯದ ಮೇಲೆ ಯಾವ ರೀತಿಯಲ್ಲಿ ಒಳ್ಳೆಯ ಮತ್ತು ಕೆಟ್ಟ ಪರಿಣಾಮವನ್ನು ಬೀರುತ್ತದೆ ಎಂಬುದನ್ನ ಅರಿತುಕೊಳ್ಳಬೇಕು. ವೈನ್ನಲ್ಲಿ ರೋಗನಿರೋಧಕ ಗುಣಲಕ್ಷಣಗಳು ಹೆಚ್ಚಿವೆ.