ಬೆಂಗಳೂರು : ಸೇಬು ಹಣ್ಣಿನ್ನು ತಿಂಡಿಗಳಿಗೆ ಬಳಸುತ್ತಾರೆ. ಅದೇರೀತಿ ಸೇಬು ಹಣ್ಣಿನಿಂದ ಸಾಂಬಾರ್ ಕೂಡ ತಯಾರಿಸಬಹುದು, ಅದು ಹೇಗೆ ಎಂಬುದನ್ನು ತಿಳಿಯೋಣ.
ಬೇಕಾಗುವ ಸಾಮಾಗ್ರಿಗಳು : ಸೇಬುಹಣ್ಣು 2, ಹಸಿಮೆಣಸಿನಕಾಯಿ 4, ಉಪ್ಪು, ಬೆಲ್ಲ, ಸಾಸಿವೆ, ಅರಿಶಿನ, ಕರಿಬೇವು, ಇಂಗು, ಜೀರಿಗೆ, ಬೆಳ್ಳುಳ್ಳಿ
ಮಾಡುವ ವಿಧಾನ : ಸೇಬುಹಣ್ಣನ್ನು ಸಿಪ್ಪೆ ತೆಗೆದು ಕಟ್ ಮಾಡಿ ನೀರಿನಲ್ಲಿ ಬೇಯಿಸಿ. ಅದು ಕುದಿಯುತ್ತಿದ್ದಂತೆ ಅದಕ್ಕೆ ಉಪ್ಪು, ಬೆಲ್ಲ ಹಾಕಿ. ಬಳಿಕ ಇನ್ನೊಂದು ಪಾತ್ರೆಯಲ್ಲಿ ಎಣ್ಣ, ಸಾಸಿವೆ, ಅರಿಶಿನ, ಕರಿಬೇವು, ಇಂಗು, ಜೀರಿಗೆ, ಬೆಳ್ಳುಳ್ಳಿ ಹಾಕಿ ಒಗ್ಗರಣೆ ಹಾಕಿ ಅದನ್ನು ಸೇಬಿನ ಸಾರಿಗೆ ಮಿಕ್ಸ್ ಮಾಡಿ ಕುದಿಸಿದರೆ ಸೇಬಿನ ಸಾಂಬಾರ್ ರೆಡಿ.