ತೆಂಗಿನಕಾಯಿ ಮತ್ತು ಸಕ್ಕರೆಯನ್ನು ಸೇರಿಸಿ ತಿಂದರೆ ಏನಾಗುತ್ತದೆ ಗೊತ್ತಾ?
ಶನಿವಾರ, 7 ಜುಲೈ 2018 (06:53 IST)
ಬೆಂಗಳೂರು : ಕೆಲವೊಮ್ಮೆ ಪೂಜೆ ಹಾಗೂ ವಿಶೇಷ ಸಂದರ್ಭದಲ್ಲಿ ತೆಂಗಿನಕಾಯಿ, ಸಕ್ಕರೆ, ಅವಲಕ್ಕಿಯನ್ನ ಸೇರಿಸಿ ತಿನಿಸು ಮಾಡಿ ತಿನ್ನುತ್ತಾರೆ. ಆದರೆ ಇದು ಆರೋಗ್ಯಕ್ಕೆ ಉತ್ತಮವೇ? ಅಲ್ಲವೇ ಎಂಬುದು ತಿಳಿದಿರುವುದಿಲ್ಲ. ಆದರೆ ಇದನ್ನು ತಿಂದವರು ಭಯಪಡುವ ಅಗತ್ಯವಿಲ್ಲ. ಯಾಕೆಂದರೆ ಇದು ಆರೋಗ್ಯಕ್ಕೆ ಹಲವಾರು ರೀತಿಯ ಪ್ರಯೋಜನಗಳನ್ನು ನೀಡುತ್ತದೆ.
ತೆಂಗಿನಕಾಯಿ ಮತ್ತು ಸಕ್ಕರೆಯಲ್ಲಿ ಆರೋಗ್ಯಕರ ಪ್ರಮಾಣದ ಸತು, ಕ್ಯಾಲ್ಸಿಯಂ, ಫಾಸ್ಪರಸ್, ಮೆಗ್ನೀಶಿಯಮ್ ಮತ್ತು ಇತರ ಖನಿಜಾಂಶಗಳು ಇರುತ್ತದೆ. ಜೊತೆಗೆ ಆಂಟಿ ಆಕ್ಸಿಡೆಂಟ್ ಗಳು, ಫೈಟೋನ್ಯೂಟ್ರಿಯೆಂಟ್ ಗಳು ಮತ್ತು ಫ್ಲವೊನಾಯ್ಡ್ ಗಳನ್ನ ಹೊಂದಿರುತ್ತವೆ.
ತೆಂಗಿನಕಾಯಿ ಮತ್ತು ಸಕ್ಕರೆಯು ಹೆಚ್ಚಿನ ಪ್ರಮಾಣದ ಆಹಾರದ ಫೈಬರ್ ಅನ್ನು ಜೀರ್ಣಕ್ರಿಯೆಗೆ ಒಳಪಡಿಸುತ್ತದೆ. ಇದು ಜೀರ್ಣಾಂಗಗಳ ಮೂಲಕ ಆಹಾರವನ್ನು ತಳ್ಳುವಲ್ಲಿ ಸಹಾಯ ಮಾಡುತ್ತದೆ. ಇದು ಮಲಬದ್ಧತೆಯನ್ನ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆಂಟಿಆಕ್ಸಿಡೆಂಟ್ ಗಳು ದೇಹವನ್ನು ಒತ್ತಡದಿಂದ ರಕ್ಷಿಸುತ್ತವೆ ಮತ್ತು ಕ್ಯಾನ್ಸರ್ ತಡೆಗಟ್ಟುವಲ್ಲಿ ಸಹಕಾರಿಯಾಗುತ್ತದೆ. ರಕ್ತಹೀನತೆ ತಡೆಯುತ್ತದೆ ಮತ್ತು ಕೊಲೆಸ್ಟರಾಲ್ ಕಡಿಮೆ ಮಾಡುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ