ನಿಮ್ಮ ಮಗು ಚೂಟಿಯಾಗಬೇಕೇ? ಅದಕ್ಕೇನು ಮಾಡಬೇಕು ತಿಳಿದುಕೊಳ್ಳಿ

ಬುಧವಾರ, 18 ಜನವರಿ 2017 (08:59 IST)
ಬೆಂಗಳೂರು: ಪ್ರತಿಯೊಬ್ಬರಿಗೂ ತನ್ನ ಮಗು ಚುರುಕು ಮತಿ ಹೊಂದಿರಬೇಕೆಂಬ ಆಸೆಯಿರುತ್ತದೆ. ಆದರೆ ಅದೆಲ್ಲಾ ನಮ್ಮ ಕೈಯಲ್ಲಿ ಇಲ್ಲವಲ್ಲಾ ಎಂದು ಸುಮ್ಮನೇ ಕೂರಬೇಕಾಗಿಲ್ಲ. ನಿಮ್ಮ ಮಗು ಚೂಟಿಯಾಗಬೇಕೆಂದರೆ ಒಂದು ಉಪಾಯವಿದೆ ಏನದು ನೋಡಿ.

ಗರ್ಭಿಣಿಯಾಗಿದ್ದಾಗ ನೀವು ಯಾವ ರೀತಿಯ ಆಹಾರ ತೆಗೆದುಕೊಳ್ಳುತ್ತೀರಿ ಎನ್ನುವುದರ ಮೇಲೆ ಎಲ್ಲವೂ ನಿರ್ಧಾರವಾಗುತ್ತದಂತೆ. ಗರ್ಭಿಣಿ ಮಹಿಳೆ ಸಾಕಷ್ಟು ಪೋಷಕಾಂಶಯುಕ್ತ ಆಹಾರ ಮತ್ತು ಉತ್ತಮ ವಾತಾವರಣದಲ್ಲಿ ಬೆಳೆದರೆ ಹುಟ್ಟುವ ಮಗುವೂ ಚುರುಕಾಗಿರುತ್ತದೆ ಎಂದು ನೂತನ ಸಂಶೋಧನೆ ತಿಳಿಸಿದೆ.

ಬಹು ಪೋಷಕಾಂಶಯುಕ್ತ ಆಹಾರ ತೆಗೆದುಕೊಳ್ಳುವ ಗರ್ಭಿಣಿ ಮಹಿಳೆ ಜನ್ಮ ನೀಡುವ ಮಗುವಿನ ಜ್ಞಾಪಕ ಶಕ್ತಿ ಉತ್ತಮವಾಗಿರುತ್ತದೆ ಎಂದು ಇಂಡೋನೇಷ್ಯಾದ ಸಂಶೋಧಕರು ಕಂಡುಕೊಂಡಿದ್ದಾರೆ. “ಮಗುವಿನ ಜೀವ ವೈಜ್ಞಾನಿಕ ಕಾರಣಗಳಿಗಿಂತಲೂ ಅದು ಬ್ರೂಣದಲ್ಲಿರುವಾಗ ಎಂತಹ ವಾತಾವರಣದಲ್ಲಿ ಬೆಳೆಯುತ್ತದೆ ಎನ್ನುವುದು ಅದರ ಬುದ್ಧಿಮತ್ತೆಯನ್ನು ನಿರ್ಧರಿಸುತ್ತದೆ” ಎಂದು ಸಂಶೋಧಕರು ಹೇಳಿದ್ದಾರೆ.

ಉತ್ತಮ ಪೋಷಕಾಂಶ ಸೇವಿಸದಿದ್ದರೆ ಹುಟ್ಟುವ ಮಗು ಕಡಿಮೆ ತೂಕ, ಅವಧಿ ಪೂರ್ಣ ಜನನ, ಕಳಪೆ ದೈಹಿಕ ಬೆಳವಣಿಗೆ ಆಗುವ ಸಾಧ್ಯತೆ ಹೆಚ್ಚು. ಹಾಗಾಗಿ ಗರ್ಭಿಣಿ ಮಹಿಳೆಯರು ಪೋಷಕಾಂಶಯುಕ್ತ ಆಹಾರ ಸೇವಿಸುವುದು ತುಂಬಾ ಮುಖ್ಯ ಎಂದು ಅಧ್ಯಯನಕಾರರು ಅಭಿಪ್ರಾಯಯಪಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ