ಬೆಂಗಳೂರು: ತೂಕ ಇಳಿಸುವುದು ಹೇಗೆ ಎಂಬ ಚಿಂತೆಯೇ? ಅದಕ್ಕೆ ಬೆಳ್ಳಂ ಬೆಳಿಗ್ಗೆ ಈ ಕೆಲವು ಅಭ್ಯಾಸಗಳನ್ನು ಮಾಡಿಕೊಂಡರೆ ಸಾಕು. ತನ್ನಿಂತಾನೇ ತೂಕ ಇಳಿಸಬಹುದು. ಅವು ಯಾವುವೆಂದು ನೋಡಿಕೊಳ್ಳಿ.
ಬಿಸಿ ನೀರು ಕುಡಿಯಿರಿ
ಬೆಳಿಗ್ಗೆ ಎದ್ದ ತಕ್ಷಣ ಕಾಫಿ ಕುಡಿಯುವುದನ್ನು ಬಿಟ್ಟು ಹದ ಬಿಸಿ ನೀರು ಸೇವಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದು ಜೀರ್ಣ ಕ್ರಿಯೆಯನ್ನು ಸುಗಮಗೊಳಿಸುವುದಲ್ಲದೆ, ದೇಹದ ಸಮತೋಲನವನ್ನು ಕಾಪಾಡುತ್ತದೆ.
ನಾರಿನಂಶವಿರುವ ಉಪಾಹಾರ
ಬೆಳಗ್ಗಿನ ತಿಂಡಿಗೆ ಏನು ತಿಂತೀರೋ ಬಿಡ್ತೀರೋ, ಆದರೆ ಅದರಲ್ಲಿ ಹೆಚ್ಚು ನಾರಿನಂಶ, ಪೋಷಕಾಂಶ ಇರುವ ಹಾಗೆ ನೋಡಿಕೊಳ್ಳಿ. ಹೆಚ್ಚು ಪ್ರೊಟೀನ್ ಗಳಿರುವ ಆಹಾರ ಸೇವಿಸಿದರೆ, ಅದನ್ನು ಜೀರ್ಣಿಸಿಕೊಳ್ಳಲು ದೇಹ ಹೆಚ್ಚು ಶ್ರಮವಹಿಸಬೇಕಾಗುತ್ತದೆ. ಇದರಿಂದ ತಾನಾಗಿಯೇ ತೂಕ ಕಡಿಮೆಯಾಗುತ್ತದೆ.
ಬುತ್ತಿ ಕಟ್ಟಿಕೊಳ್ಳಿ
ಬೆಳಗಿನ ತಿಂಡಿ ತಿಂದರೆ ಸಾಕೇ? ದಿನದ ಉಳಿದ ಹೊತ್ತಿನಲ್ಲಿ ತಿನ್ನಲು ಏನಾದರೂ ಬೇಡವೇ? ನಡುವೆ ಹಸಿವಾದಾಗ ತಿನ್ನಲು ಬುತ್ತಿ ಕಟ್ಟಿಕೊಳ್ಳಿ. ಕಚೇರಿಯಲ್ಲಿ ಹಸಿವಾಯಿತೆಂದು ಕ್ಯಾಂಟೀನ್ ಗೆ ಹೋಗಿ ಸಿಕ್ಕಿದ್ದನ್ನು ತಿನ್ನುವ ಅಭ್ಯಾಸ ಬಿಡಿ.
ವ್ಯಾಯಾಮ
ಎಲ್ಲಕ್ಕಿಂತ ಮುಖ್ಯವಾದುದು ದೈಹಿಕ ಕಸರತ್ತು. ಹೊಟ್ಟೆ ತುಂಬಾ ತಿಂದು, ಕುಳಿತಲ್ಲಿಯೇ ಕುಳಿತಿದ್ದರೆ, ಬೊಜ್ಜು ಬೆಳೆಯುವುದು ಸಹಜ. ಹಾಗಾಗಿ ದೇಹದಿಂದ ಸ್ವಲ್ಪ ಬೆವರಿಳಿಸುವ ಕೆಲಸವನ್ನೂ ಮಾಡಿ. ದೇಹಕ್ಕೆ ದೈಹಿಕ ಕಸರತ್ತು ಕೊಡಲು ವ್ಯಾಯಾಮ ಮಾಡಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ